ಕರ್ನಾಟಕದಲ್ಲಿ ಕಾಳ ನಿಷೇಧಕ್ಕೆ ಪ್ರತಿಕ್ರಿಯಿಸಿದ ರಜನೀಕಾಂತ್ ಏನ್ ಹೇಳಿದ್ರು ಗೊತ್ತಾ

Rajinikanth responds on Kaala ban in Karnataka | itskannada National

National (itskannada). ಕರ್ನಾಟಕದಲ್ಲಿ ಕಾಳ ನಿಷೇಧಕ್ಕೆ ಪ್ರತಿಕ್ರಿಯಿಸಿದ ರಜನೀಕಾಂತ್ ಏನ್ ಹೇಳಿದ್ರು ಗೊತ್ತಾ-Rajinikanth responds on Kaala ban in Karnatakaಕರ್ನಾಟಕದಲ್ಲಿ, ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಚಿತ್ರ ಕಾಳ ಬ್ಯಾನ್ ವಿಚಾರವಾಗಿ ಕೊನೆಗೂ ಅವರು ಮಾತನಾಡಿದ್ದಾರೆ. ಕಾಳ ಚಿತ್ರ ಕರ್ನಾಟಕದಲ್ಲಿ ರಿಲಿಸ್ ಮಾಡುವುದಿಲ್ಲ ಎನ್ನುತ್ತಿರುವ ವಿಷಯ ತನಗೆ ಇಂದೇ ಗೊತ್ತಾಗಿದೆ , ಆದರೆ ಯಾವ ಕಾರಣಕ್ಕೆ ಬ್ಯಾನ್ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

ಕರ್ನಾಟಕ ಫಿಲ್ಮ್ ಚೇಂಬರ್ ಆಪ್ ಕಾಮರ್ಸ್ (KFCC) ಅನ್ನುವುದು ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಪ್ ಕಾಮರ್ಸ್ ನ ಒಂದು ಭಾಗವಾಗಿದೆ, ತಪ್ಪದೆ  ಅವರು ಈ ವಿಷಯದಲ್ಲಿ ಅವರು ಮಧ್ಯಸ್ಥಿಕೆ ವಹಿಸುತ್ತಾರೆ ಎಂದಿದ್ದಾರೆ. ಈ ಬಗ್ಗೆ ಅವರು ಚರ್ಚಿಸಿ ಸ್ನೇಹ ಪೂರ್ವಕ ನಿರ್ಣಯಕ್ಕೆ ಬರುವಂತೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಆದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ನಿಶ್ಚಿತ , ಅದನ್ನು ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಪ್ ಕಾಮರ್ಸ್ ನೋಡಿಕೊಳ್ಳುತ್ತದೆ ಎಂದಿದ್ದಾರೆ.

ಆಗಾದರೆ ಕರ್ನಾಟಕದಲ್ಲಿ ಕಾಳ ಚಿತ್ರದ ಬಗ್ಗೆ ನಡಿಗರ್ ಸಂಘ ಮೌನ ವಹಿಸಿರುವುದೇಕೆ ಎಂಬ ಪ್ರಶ್ನೆಗೆ , ಕರ್ನಾಟಕದಲ್ಲಿ ಚಿತ್ರದ ಬ್ಯಾನ್ ಬಗ್ಗೆ ಯೋಚಿಸಿರುವ ವಿಷಯ ನಮಗೆಲ್ಲಾ ತಿಳಿದಿದ್ದೇ ಇಂದು , ಶೀಘ್ರದಲ್ಲೇ ನಡಿಗರ್ ಸಂಘ ಈ ಬಗ್ಗೆ ನಮಗೆ ಸ್ಪಂದಿಸಲಿದೆ ಎಂದಿದ್ದಾರೆ.

2017 ರಲ್ಲಿ ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಕರ್ನಾಟಕದಲ್ಲಿ ತೆರೆ ಕಂಡು ಗಳಿಸಿದ್ದು ಬರೋಬ್ಬರಿ 30 ಕೋಟಿ, ಚಿತ್ರದ ಅರ್ಧ ಭಾಗದ ಗಳಿಕೆ ಇರುವುದೇ ಕರ್ನಾಟಕದಲ್ಲಿ , ಈಗ ಕಾಳ ಬ್ಯಾನ್ ಆದಲ್ಲಿ ಓವರಾಲ್ ಕಲೆಕ್ಷನ್ ಮೇಲೆ ಭಾರೀ ಪ್ರಭಾವ ಬೀರಲಿದೆ. ಕಾವೇರಿ ವಿಚಾರವಾಗಿ ರಜನೀಕಾಂತ್ ನೀಡಿದ್ದ ಹೇಳಿಕೆಗಳು ಕನ್ನಡಿಗರನ್ನು ಕೆರಳಿಸಿದ್ದು ಅವರ ಚಿತ್ರ ಕರ್ನಾಟಕಲ್ಲಿ ತೆರೆಗೆ ಅವಕಾಶ ಮಾಡಿಕೊಡಬಾರದೆಂದು 10 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಕನ್ನಡ ಫಿಲ್ಮ್ ಚೇಂಬರ್ ಸಂಪರ್ಕಿಸಿದ್ದರು.

ಒಟ್ಟಾರೆ ರಜನೀಕಾಂತ್ ರವರು ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಪ್ ಕಾಮರ್ಸ್ ನ್ನು ಮಧ್ಯಸ್ಥಿಕೆಗೆ ತರಲು ಆಲೋಚಿಸಿದ್ದಾರೆ….. /// Kannada News – National News Latest –  itskannada National

ಇದನ್ನು ಓದಿ – ಪುರುಷರನ್ನು ಆಕರ್ಷಿಸುವ ರಾಶಿಚಕ್ರಗಳು