ರಾಹುಲ್ ಗೆ ಪ್ರಧಾನಿ ಕನಸು ಕಾಣುವ ಹಕ್ಕಿದೆ-ಶಿವಸೇನೆ

National News (itskannada)ಮುಂಬೈ: ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿಯ ಮಿತ್ರ ಪಕ್ಷ ಶಿವಸೇನಾ ರಾಹುಲ್ ಬೆನ್ನಿಗೆ ನಿಂತಿರುವುದು ಕುತೂಹಲ ಮೂಡಿಸಿದೆ.

ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಪ್ರಧಾನಿಯಾಗುವ ಕನಸು ಕಾಣುವ ಹಕ್ಕಿದೆ. ಪ್ರಧಾನಿ ಮೋದಿ ಅವರು ತಮ್ಮನ್ನು ‘ಪ್ರಧಾನ ಸೇವಕ ‘  ಎಂದು ಕರೆದುಕೊಂಡಿದ್ದು,  ಈ ದೇಶದ ಎಲ್ಲಾ ಸೇವಕರು ಪ್ರಧಾನಮಂತ್ರಿಯಾಗಬಹುದು ಎಂದು ಶಿವಸೇನಾ ಮುಖಂಡ ಸಂಜಯ ರಾವತ್ ಹೇಳಿದ್ದಾರೆ.

2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಿಯಾಗುವುದಾಗಿ ರಾಹುಲ್ ಹೇಳಿಕೆ ನೀಡಿದ್ದರು.

ಇದನ್ನು ಕಟುವಾಗಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಹುದ್ದೆ ರಾಜವಂಶಕ್ಕೆ ಸೀಮಿತವಾದುದಲ್ಲ ಎಂದು ಹೇಳಿದ್ದರು.

ಇನ್ನೊಬ್ಬ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ರಾಹುಲ್ ಹೇಳಿಕೆಯನ್ನು ಅಪ್ರಬುದ್ಧ ಎಂದು ಹೇಳಿದ್ದಲ್ಲದೇ ಇದರಿಂದ ಕೆಲವು ಪಕ್ಷಗಳು ಕಾಂಗ್ರೆಸ್ ಮೈತ್ರಿಯಿಂದ ದೂರ ಉಳಿಯಲೂಬಹುದು ಎಂದಿದ್ದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – National News Latest