ಬೆಂಕಿ ಕಡ್ಡಿ ಜೊತೆ ಆಟ-ಬಾಲಕ ಇಡೀ ಗ್ರಾಮ ಸುಟ್ಟ

0 162

National News (itskannada) ಆಗ್ರ : ಬೆಂಕಿ ಕಡ್ಡಿ ಜೊತೆ ಆಟ-ಬಾಲಕ ಇಡೀ ಗ್ರಾಮ ಸುಟ್ಟ : ಮಕ್ಕಳ ಕೈಗೆ ಅಪಾಯದ ವಸ್ತುಗಳು ಕೊಟ್ರೆ ಏನಾಗಬಹುದೆಂಬ ಸಾಕ್ಷಿಗೆ ಆಗ್ರಾ ಸಮೀಪ ನಡೆದಿರೋ ಘಟನೆಯೇ ಸಾಕ್ಷಿ, ಬೆಂಕಿ ಕಡ್ಡಿ ಗೀರಿ ಗೀರಿ ಆಟ ಆಡ್ತಾಯಿದ್ದ ಬಾಲಕ ಅದ್ಯಾಗೋ ತನ್ನ ಗುಡಿಸಲಿಗೆ ಬೆಂಕಿ ಇಟ್ಟ ಪರಿಣಾಮ ಇಡೀ ಗ್ರಾಮದ ಗುಡಿಸಲುಗಳೆಲ್ಲ ಸುಟ್ಟು ಭಸ್ಮವಾಗಿವೆ, ಯಾವ ಪೂರ್ವಜನ್ಮದ ಪುಣ್ಯವೋ ಏನೋ ಅದೃಷ್ಟವಶಾತ್ ಅವಘಡದಲ್ಲಿ ಪ್ರಾಣಹಾನಿಯಾಗಲಿ, ಗಾಯಗಳಾಗಲಿ ಆಗಿಲ್ಲ.

ಬೆಂಕಿ ಕಡ್ಡಿ ಜೊತೆ ಆಟ-ಬಾಲಕ ಇಡೀ ಗ್ರಾಮ ಸುಟ್ಟ

ಝಂಡಿ ಕಿ ಮಡಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅಮೃತ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾನದಿ ತಟದಲ್ಲಿ ವಾಸಿಸುತ್ತಿದ್ದ  ಬಡ ಹಿಂದುಳಿದ ಗ್ರಾಮಸ್ಥರ ಸೂರುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.

ಹುಲ್ಲು , ಗರಿ ಮರದ ತಗಡು ಬಳಸಿ ನಿರ್ಮಿಸಿದ್ದ ಗುಡಿಸಲುಗಳು ಬೆಂಕಿಯ ರಭಸಕ್ಕೆ ಕೆಲವೊತ್ತಲ್ಲೇ ಪೂರ್ಣ ಪ್ರಮಾಣದಲ್ಲಿ ಸುಟ್ಟಿವೆ , ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕ ಸೌಲಭ್ಯವಿಲ್ಲದ ಕಾರಣ ಅಗ್ನಿಶಾಮಕ ವಾಹನ ಬರಲು ಸಾಧ್ಯವಾಗಲಿಲ್ಲ. ಆದುದರಿಂದಲೇ ಹಾನಿ ಪ್ರಮಾಣ ಹೆಚ್ಚಿದೆ.

ಘಟನೆ ಬಗೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಪ್ರಕಾಶ್, ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, ಹೆಚ್ಚಿನವು ಹುಲ್ಲು, ಪ್ಲಾಸ್ಟಿಕ್ ತಗಡಿನಿಂದ ನಿರ್ಮಿಸಲ್ಪಟ್ಟಿವೆ. ಹೀಗಾಗಿ ಬೆಂಕಿ ಸುಲಭವಾಗಿ ಪಸರಿಸಿದ್ದು ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಗ್ರಾಮಸ್ಥರನ್ನು ಬೇರೊಂದೆಡೆಗೆ ಸ್ಥಳಾಂತರಿಸಲಾಗಿದ್ದು, ಆಹಾರ ಮತ್ತು ನೀರನ್ನು ಒದಗಿಸಲಾಗಿದೆ ಎಂದಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ- National News Latest – Kannada News

Webtitle : ಬೆಂಕಿ ಕಡ್ಡಿ ಜೊತೆ ಆಟ-ಬಾಲಕ ಇಡೀ ಗ್ರಾಮ ಸುಟ್ಟ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!