ಮೋದಿ ಹತ್ಯೆಗೆ ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ

Kannada News (itskannada) National News ದೆಹಲಿ: ಮೋದಿ ಹತ್ಯೆಗೆ ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ : ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಪುಣೆ ಪೋಲೀಸ್ ರು ಬಹಿರಂಗ ಪಡಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೇವಲ ಜನಪ್ರಿಯರಲ್ಲ , ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆ ಶತ್ರುಗಳು ಹುಟ್ಟಿಕೊಂಡಿದ್ದಾರೆಂದು ಅವರ ಅಭಿಮಾನಿಗಳು ಕಳವಳ ವ್ಯಕ್ತ ಪಡಿಸಿದ್ದಾರೆ.

ಮೋದಿ ಹತ್ಯೆಗೆ ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ

ಅದರಂತೆ , ಪ್ರಧಾನಿ ನರೇಂದ್ರ ಮೋದಿ ರವರ ಚಲನ ವಲನಗಳ ಮೇಲೆ ಮಾವೋವಾದಿಗಳು ಕಣ್ಣಿಟ್ಟಿದ್ದಾರಂತೆ , ಈಗ ಸ್ಫೋಟಕ ಮಾಹಿತಿ ಬರುತ್ತಿದ್ದಂತೆ , ಪೊಲೀಸರು ಹೈ- ಅಲರ್ಟ್ ಆಗಿದ್ದಾರೆ.

ದೇಶದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಮೋದಿ ಅವರನ್ನು ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದಾರಂತೆ. ದಿನದಿಂದ ದಿನಕ್ಕೆ ಪ್ರಧಾನಿ ಜನಪ್ರಿಯರಾಗುತ್ತಿದ್ದಾರೆ, ಅವರ ಬೆಳವಣಿಗೆ ಸಹಿಸದ ಕೈಗಳ ಸಂಚು ಇದಾಗಿರಬಹುದೆಂದು ಅನುಮಾನ ಮೂಡಿದೆ. ಮುಂಬರುವ ಲೋಕಸಭೆ ಚುನಾವಣೆ ಇರುವದರಿಂದ ಈಗ ಹತ್ಯೆಗೆ ಸಂಚು ರೂಪಿಸಿದ್ದಾರ ಅನ್ನೋ ಮಾಹಿತಿ ಬಂದಿದೆ. ಮೋದಿ ರೋಡ್  ಶೋ ವೇಳೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿ ಇದೆ. ಇದರಿಂದ ದೇಶದಲ್ಲಿ ಹೈ ಅಲರ್ಟ್ ಸೆಕ್ಯೂರಿಟಿ ಮಾಡುತ್ತಿದ್ದಾರೆ. ಅಲ್ಲದೆ ರಾಜೀವ್ ಗಾಂಧೀ ಹತ್ಯೆಗೆ ಸಂಚಿನಂತೆ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಆತಂಕವುಂಟು ಮಾಡಿದೆ.
ಈ ಕುರಿತು ಹತ್ಯೆಗೆ ಸಂಚು ರೂಪಿಸಿ ಬರೆದಿದ್ದ, ಪತ್ರ ಪುಣೆ ಪೊಲೀಸರಿಗೆ ಲಭ್ಯವಾಗಿದೆ. ಕಳೆದ ಬುಧವಾರ ನಿಷೇಧಿತ ನಕ್ಸಲ್‌ ಸಂಘಟನೆ ಮಾವೋಯಿಸ್ಟ್ ಜೊತೆಗೆ ಸಂಬಂಧ ಹೊಂದಿದ್ದಾರೆ ಎನ್ನುವ ಆಧಾರದ ಮೇಲೆ ಐವರನ್ನು ಬಂಧಿಸಲಾಗಿತ್ತು. ಈ ಬಂಧಿತರಿಂದ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಪತ್ರದಲ್ಲಿ ರಾಜೀವ್‌ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಡ್‌ ಶೋ ವೇಳೆ ಕೊಲ್ಲುವ ಸಂಚು ರೂಪಿಸಿರುವ ವಿಷಯ ಪ್ರಸ್ತಾಪಿಸಲಾಗಿದೆ. ಈ ಪತ್ರವನ್ನು ಪುಣೆಯ ಪೊಲೀಸರು ಸೆಷನ್‌ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ////
WebTitle : ಮೋದಿ ಹತ್ಯೆಗೆ ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ

Keyword : ಮೋದಿ ಹತ್ಯೆಗೆ ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ , ಮೋದಿ ಕೊಲ್ಲಲು ಸಂಚು -ಸ್ಪೋಟಕ್ ಮಾಹಿತಿ ಬಹಿರಂಗ ,

ರಾಜೀವ್ ಗಾಂಧಿ ಹತ್ಯೆ ಯತ್ನ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಮಾವೋವಾದಿ ಸ್ಕೆಚ್ ,ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು ,ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್,