ಮಟನ್ ಸಾರು ಮಾಡದಿದ್ದಕ್ಕೆ ಮಡದಿಯನ್ನ ಮಹಡಿಯಿಂದ ತಳ್ಳಿದ ಪತಿ

Kannada News (itskannada) ಮಟನ್ ಸಾರು ಮಾಡದಿದ್ದಕ್ಕೆ ಮಡದಿಯನ್ನ ಮಹಡಿಯಿಂದ ತಳ್ಳಿದ ಪತಿ.

ಉತ್ತರ ಪ್ರದೇಶ : ಕುಡುಕ ಮಹಾಶಯ ಪತಿ ತನ್ನ ಪತ್ನಿಗೆ ಸಾಯಂಕಾಲ ನಾನು ಹೊಸಿ ಪರಮಾತ್ಮನ್ನ ಬಿಟ್ಕೊಂಡು ಬರೋದ್ರೋಲ್ಗೆ , ಮಟನ್ ಸಾರು ಮಾಡಿರು ನಾನು ಬಂದು ಸಕತ್ತಾಗಿ ಗಂಟಲ ತನಕ ತಿಂತೀನಿ , ಅಂತ ಕುಡಿಯೋಕೆ ಹೋದ ಪತಿ ಮನೆಗೆ ಬಂದಾಗ , ಪತ್ನಿ ಮಟನ್ ಸಾರು ಮಾಡಿರಲಿಲ್ಲ , ಅಷ್ಟೇ ಅವಿವೇಕಿ ಕುಡುಕ ಪತಿಗೆ ಪಿತ್ತ ನೆತ್ತಿಗೇರಿದೆ, ಹೆಂಡತಿಯನ್ನು ಹಿಡಿದು ಒಂದೇ ಸಮ ಬಡಿದಿದ್ದಾನೆ.

ಕೇವಲ ಬಡಿದು, ಸುಮ್ಮನಾಗಿದ್ದರೆ , ಇವತ್ತು ಇಲ್ಲಿ ಸುದ್ದಿಯಾಗ್ತಾ ಇರಲಿಲ್ಲ , ಬಡಿಯುವಷ್ಟು ಬಡಿದು , ಮಹಡಿಯ ಮೇಲಿಂದ ನಿರ್ಧಾಕ್ಷಿಣ್ಯವಾಗಿ ತಳ್ಳಿಬಿಟ್ಟಿದ್ದಾನೆ.

ಈ ಭಯಾನಕ ಘಟನೆ ನಡೆದಿರೋದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ , ಕುಡುಕ ಮಹಾಶಯನಿಗೆ ಅವನ ಸಹೋದರ ಮತ್ತು ತಂದೆಯೂ ಸಹಕರಿಸಿದ್ದು , ಮೊದಲು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ, ನಂತರ ಮೂರನೆಯ ಮಹಡಿಯಿಂದ ಕೆಳಕ್ಕೆ ದೂಡಿದ್ದಾರೆ ಎನ್ನಲಾಗಿದೆ.

ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟ ಆಕೆ , ರಾಣಿ ಎಂದೂ , ಕೊಲೆ ಮಾಡಿದ ಪತಿ ಮನೋಜ್ ಕುಮಾರ್ ಎಂದೂ ತಿಳಿದು ಬಂದಿದೆ.

ಈಗಾಗಲೇ ಪೊಲೀಸರು ಮಹಿಳೆಯ ಮಾವ ಮತ್ತು ಮೈದನನ್ನು ಬಂಧಿಸಿದ್ದು , ತಲೆಮರೆಸಿಕೊಂಡಿರುವ  ಮುಖ್ಯ ಆರೋಪಿ ಮೊನೋಜ್ ಕುಮಾರ್ ಹುಡುಕಾಟ ನಡೆದಿದೆ…….. ////

ಮಟನ್ ಸಾರು ಮಾಡದಿದ್ದಕ್ಕೆ ಮಡದಿಯನ್ನ ಮಹಡಿಯಿಂದ ತಳ್ಳಿದ ಪತಿ –