ಹಿಮದಲ್ಲಿ ಸಿಕ್ಕಿಬಿದ್ದ 3,000 ಜನರನ್ನು ಉಳಿಸಿದ ಭಾರತೀಯ ಸೇನೆ

Indian Army Rescued Over 3,000 Tourists at Sikkim India-China border

0

ಹಿಮದಲ್ಲಿ ಸಿಕ್ಕಿಬಿದ್ದ 3,000 ಜನರನ್ನು ಉಳಿಸಿದ ಭಾರತೀಯ ಸೇನೆ

Indian Army Rescued Over 3,000 Tourists at Sikkim India-China border

ರಾಷ್ಟ್ರೀಯ – ಗ್ಯಾಂಗ್ಟಾಕ್ :  ಭಾರತ-ಚೀನಾ ಗಡಿಯ ನಥುಲಾ ಮಾರ್ಗದಲ್ಲಿ ಸಿಕ್ಕಿಬಿದ್ದ 3,000 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಬೃಹತ್ ಹಿಮಪಾತದಿಂದಾಗಿ, ಹಿಮದಲ್ಲಿ ಸಿಲುಕಿದ್ದ ವಾಹನಗಳನ್ನು ಸುರಕ್ಷತಾ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರವಾಸಿಗರಿಗೆ ಸ್ಥಳಾವಕಾಶ ನೀಡಲು ಸೈನಿಕರು ತಮ್ಮ ಬ್ಯಾರಕ್ಗಳನ್ನು ಬಿಟ್ಟುಕೊಟ್ಟದ್ದು ಕರುಣಾಜನಕ ವಿಷಯ. ತಾವು ಚಳಿಯಲ್ಲಿ ಇದ್ದರೂ ಪ್ರವಾಸಿಗರಿಗೆ ಎಲ್ಲಾ ಸುರಕ್ಷಾ ವ್ಯವಸ್ಥೆ ಕಲ್ಪಿಸಿದ್ದಾರೆ. ಆಹಾರ, ಸೌಕರ್ಯಗಳು ಮತ್ತು ರಗ್ಗುಗಳನ್ನು ಒಳಗೊಂಡಂತೆ ಪೂರ್ಣ ಸೌಕರ್ಯದ ವ್ಯಸ್ಥೆ ಮಾಡಿದ್ದಾರೆ.

ಪ್ರವಾಸಿಗರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳೂ ಸಹ ಇದ್ದು ಅವರ ಆರೋಗ್ಯ ದೃಷ್ಟಿಯಿಂದ ಹಲವು ಸೌಲಭ್ಯ ಒದಗಿಸಿ ಕೊಡಲಾಗಿದೆ ಎಂದು ಸೈನ್ಯವು ಬಹಿರಂಗಪಡಿಸಿದೆ.

ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಕಾರ್ಯ ಪ್ರವೃತ್ತರಾದ ಸೈನಿಕರಿಗೆ ಎಷ್ಟು ಶ್ಲಾಗಿಸಿದರೂ ಸಾಲದು.

ಹಿಮದಿಂದಾಗಿ ನಾಥುಲಾ ರಸ್ಥೆಯಲ್ಲಿ 300 ರಿಂದ 400 ವಾಹನಗಳು 17 ಮೈಲುಗಳಷ್ಟು ನಿಂತಲ್ಲೇ ನಿಂತಿದ್ದವು. ಅಲ್ಲಿಂದ ವಾಹನಗಳ ತೆರವಿಕೆಗೆ ಸೇನೆಯು ತಕ್ಷಣವೇ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಂಡು ಎಲ್ಲಾ ವಾಹನಗಳನ್ನು ಸ್ಥಳಾಂತರಿಸಲಾಯಿತು.

“ಪ್ರವಾಸಿಗರನ್ನು ಶೀತದಿಂದ ರಕ್ಷಿಸಲು ನಾವು ಅಗತ್ಯ ಔಷಧಿಗಳನ್ನು ಸರಬರಾಜು ಮಾಡಿದ್ದೇವೆ “ಎಂದು ಅಲ್ಲಿನ ಸೇನಾಧಿಕಾರಿ ತಿಳಿಸಿದ್ದಾರೆ. ಇನ್ನು ರಸ್ತೆಗಳಲ್ಲಿ ಸಂಗ್ರಹವಾದ ಹಿಮವನ್ನು ತೆಗೆದುಹಾಕಲು ಸೈನ್ಯವು ಭಾರೀ ಯಂತ್ರೋಪಕರಣಗಳನ್ನು ಮತ್ತು ವ್ಯವಸ್ಥೆಯನ್ನು ಕೈಗೊಂಡಿದೆ.

ನಮ್ಮ ಭಾರತೀಯ ಸೇನೆಯ ಈ ಕಾರ್ಯಕ್ಕೆ ನಿಮ್ಮದೊಂದು ಲೈಕ್ ಇರಲಿ , ಹಾಗೂ ಈ ಮಾಹಿತಿ ಎಲ್ಲರಿಗೂ ತಲುಪಲು ಶೇರ್ ಮಾಡಿ.////

WebTitle : ಹಿಮದಲ್ಲಿ ಸಿಕ್ಕಿಬಿದ್ದ 3,000 ಜನರನ್ನು ಉಳಿಸಿದ ಭಾರತೀಯ ಸೇನೆ-Indian Army Rescued Over 3,000 Tourists at Sikkim India-China border

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News LatestNational News KannadaLatest Kannada News