ಅಂಗೈ ಮೇಲೆ ಸೂಸೈಡ್ ನೋಟ್, ನಾನು ಮೋಸ ಹೋಗಿದ್ದೇನೆ ?

Girl Committed Suicide After Being Failure In Love

0

ಅಂಗೈ ಮೇಲೆ ಸೂಸೈಡ್ ನೋಟ್, ನಾನು ಮೋಸ ಹೋಗಿದ್ದೇನೆ ?

ಫರೀದಾಬಾದ್  : ಹರಿಯಾಣದ ಫರಿದಾಬಾದ್ನಲ್ಲಿ, ಯುವತಿಯೊಬ್ಬಳು ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಆತ್ಮಹತ್ಯೆಗೂ ಮುಂಚಿತವಾಗಿ, ಡೆತ್ ನೋಟ್ ಅನ್ನು ತನ್ನ ಕೈಯಲ್ಲಿ ಬರೆದು ಕೊಂಡಿದ್ದಾಳೆ.

ಕೈ ಮೇಲೆ ಬರೆದು ಕೊಂಡಿರುವಂತೆ ತಾನು  ಒಬ್ಬ ಯುವಕನಿಂದ ಮೋಸವೋಗಿರುವುದಾಗಿ ದೂಷಿಸಿದ್ದಾಳೆ.  ಮಾಹಿತಿಯ ನಂತರ ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಶೀಲಿಸಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿದ್ದಾರೆ.

ಯುವತಿ ತಾನು ಸಾಯುವುದಕ್ಕೆ ಮುಂಚೆ ಸಾವಿನ ಕಾರಣವನ್ನು ಗೋರಂಟಿಯಲ್ಲಿ ಬರೆದು ಕೊಂಡಿದ್ದು , ಭಾನುವಾರ ರಾತ್ರಿ ಎರಡನೇ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳನ್ನು ಹಿನಾ ಎನ್ನಲಾಗಿದ್ದು , ಸದ್ದಾಂ ಎಂಬ ಯುವಕನೇ ಆರೋಪಿ ಸ್ಥಾನದಲ್ಲಿರುವ ಯುವಕನಾಗಿದ್ದಾನೆ.  ಎರಡು ವರ್ಷಗಳ ಹಿಂದೆ ಹಿನಾ ಬಿಹಾರದಲ್ಲಿ ಅಧ್ಯಯನ ಮಾಡುತ್ತಿದ್ದಳು ,ಹಾಗೂ ಅಲ್ಲಿನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಳು.

ಆ ಸಂದರ್ಭದಲ್ಲಿ ಅಲ್ಲಿನ ವಾಸಿ ಹಾಗೂ ಹಿನಾಳ ಸಂಬಂಧಿಗಳ ಸ್ನೇಹಿತನಾಗಿದ್ದ ಸದ್ದಾಂ ಗೂ ಹಿನಾ ಳಿಗೂ ಸ್ನೇಹ ಬೆಳೆದಿದೆ.

ಹಿನಾಳ ಕುಟುಂಬದ ಪ್ರಕಾರ. ಕೆಲವಾರು ದಿನಗಳಿಂದ ಇಬ್ಬರ ನಡುವೇ ಪ್ರೇಮ ಸಂಬಂಧ ಇತ್ತು ಮತ್ತು ಈ ಮಧ್ಯೆ ತನ್ನ ಅಧ್ಯಯನವನ್ನು ಮುಗಿಸಿದ ನಂತರ ಹಿನಾ ಪರೀದಾಬಾದ್ ಗೆ ಹಿಂದಿರುಗಿದ್ದಳು.

ಫರಿದಾಬಾದ್ಗೆ ಬಂದ ನಂತರ, ಸದ್ದಾಂ ಹಿನಾಳನ್ನು ಅವೈಡ್ ಮಾಡಲು ಪ್ರಯತ್ನಿಸಿದ್ದಾನೆ , ಅಲ್ಲದೆ ಇಬ್ಬರ ನಡುವೆಯೂ ಕೆಲವು ಕಾರಣಗಳಿಗೆ ಮನಸ್ಥಾಪ ಉಂಟಾಗಿತ್ತು ಎನ್ನಲಾಗಿದೆ.

ಇದೆ ವಿಚಾರವಾಗಿ ಹಿನಾ ತನ್ನ ಮನೆಯ ಎರಡನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ////

WebTitle : ಅಂಗೈ ಮೇಲೆ ಸೂಸೈಡ್ ನೋಟ್, ನಾನು ಮೋಸ ಹೋಗಿದ್ದೇನೆ – Girl Committed Suicide After Being Failure In Love

>>> ಕ್ಲಿಕ್ಕಿಸಿ  ಕನ್ನಡ ನ್ಯೂಸ್  : National News LatestNational News KannadaKarnataka Crime NewsKannada Crime News