ಬೆಂಕಿ ಅಪಘಾತ-ಬಸ್ಮಗೊಂಡ ಎಂಟು ವಾಹನಗಳು

(itskannada) ಗಿರಿಧಿಹ (ಜಾರ್ಖಂಡ): ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಎಂಟು ವಾಹನಗಳಿಗೆ ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ಚಿರಕಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ನಕ್ಸಲ್ ರಿಂದ ಬೆದರಿಕೆ ಏನೂ ಇರಲಿಲ್ಲ. ಇದು ನಕ್ಸಲ್ ದಾಳಿಯಿಂದಾದ ಅಪಘಾತವೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಈ ಘಟನೆ ಒಂದೋ ದಾಳಿಯಿರಬಹುದು, ಇಲ್ಲವೇ ಷಡ್ಯಂತ್ರವಾಗಿರಬಹುದು ಎಂದು ಪೊಲೀಸ್ ವರಿಷ್ಠ ಸುರೇಂದ್ರ ಕುಮಾರ ಝಾ ಹೇಳಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – National News Latest