ನೋಟಿನ ಮೇಲಿನ ಗಾಂಧಿ ಚಿತ್ರ ತೆಗೆಯುವಂತೆ ABHM ಒತ್ತಾಯ

Demand to Put picture of Savarkar on the banknotes

National News (itskannada) ನೋಟಿನ ಮೇಲಿನ ಗಾಂಧಿ ಚಿತ್ರ ತೆಗೆಯುವಂತೆ ABHM ಒತ್ತಾಯ-Demand to Put picture of Savarkar on the banknotes : ಗರಿ ಗರಿ ನೋಟುಗಳಲ್ಲಿ ಮಂದಹಾಸ ಬೀರುತ್ತಾ ಕಾಣುವ ಮಹಾತ್ಮ ಗಾಂಧಿ ಚಿತ್ರ ಇಲ್ಲವಾದರೆ ಅದು ಬರಿಯ ಕಾಗದಕ್ಕೆ ಸಮ. ಆದರೆ ಇದೀಗ ಆ ಗಾಂಧಿ ಮೇಲೂ ಕೆಲವರಿಗೆ ಕಣ್ಣು ಬಿದ್ದಿದೆ ನೋಟುಗಳಲ್ಲಿನ ಗಾಂಧಿ ಚಿತ್ರವನ್ನು ತೆಗೆಯಬೇಕೆಂದು ಅಖಿಲ ಭಾರತ ಹಿಂದೂ ಮಾಹಾಸಭಾ (ABHM) ಒತ್ತಾಯ ತಂದಿದೆ.

ಗಾಂಧಿ ಚಿತ್ರ ತೆಗೆದು ಯಾವ ಚಿತ್ರ ಇಡೋದು ಅನ್ನೋ ಪ್ರಶ್ನೆಗೆ ಅವರು ಉತ್ತರಿಸಿದ್ದು , ಗಾಂಧಿ ಚಿತ್ರ ತೆಗೆದು ವೀರ ಸಾವರ್ಕರ್ ಚಿತ್ರ ಮುದ್ರಿಸಬೇಕು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಸ್ಫೂರ್ತಿ ತಂದುಕೊಟ್ಟ ಅವರಿಗೆ ಈ ಮೂಲಕ ಗೌರವ ಸೂಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮಹಾತ್ಮ ಗಾಂಧಿಗೂ ಮೊದಲೇ ಸ್ವಾತಂತ್ರ್ಯ ಹೋರಾಟಕ್ಕೆ ದುಮಿಕಿದವರು , ಅವರು ರಚಿಸಿದ who is Hindu ಎಂಬ ಪುಸ್ತಕ ತುಂಬಾ ಪ್ರಸಿದ್ದವಾದುದು ಆದುದರಿಂದ ನೋಟುಗಳ ಮೇಲೆ ಅವರ ಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತ ಹಿಂದೂ ಮಾಹಾಸಭಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. /// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ಕ್ಲಿಕ್ಕಿಸಿ –  National News Latest – National News Kannada