ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶ ಕಳುಹಿಸುವವರ ವಿರುದ್ಧ ಕ್ರಮ

Andhra Pradesh Telangana Cops Efforts Tackle Fake News Sender

0 202

Crime News (itskannada) ಆಂದ್ರಪ್ರದೇಶ : ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶ ಕಳುಹಿಸುವವರ ವಿರುದ್ಧ ಕ್ರಮ-Andhra Pradesh Telangana Cops Efforts Tackle Fake News Sender : ರಾಜ್ಯಗಳಲ್ಲಿ ನಕಲಿ ಸುದ್ದಿಗಳು ಮತ್ತು ವದಂತಿಯ ವ್ಯಾಪಕ ಭೀತಿಯಿಂದಾಗಿ ಆಂಧ್ರ ಮತ್ತು ತೆಲಂಗಾಣ ಪೊಲೀಸರು ಸಾಮಾಜಿಕ ಮಾಧ್ಯಮದ ಮೂಲಕ ದೃಢೀಕರಿಸದ ಮಾಹಿತಿಯನ್ನು ಕಳುಹಿಸುವ ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶ ಕಳುಹಿಸುವವರ ವಿರುದ್ಧ ಕ್ರಮ

ಕಳೆದ ಕೆಲವು ತಿಂಗಳುಗಳಿಂದ, “ಪಾರ್ಥಿ ಗ್ಯಾಂಗ್”, ಕುಖ್ಯಾತ ಗುಂಪು, ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ, ಮಕ್ಕಳನ್ನು ಅಪಹರಣ ಮಾಡಲು ಬೇರೆ ಬೇರೆ ರಾಜ್ಯಗಳಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಊಹಾಪೋಹಗಳು ನಕಲಿ ಸಂದೇಶಗಳು ಪೊಲೀಸರಿಗೆ ತಲೆ ಬಿಸಿ ಮಾಡಿತ್ತು .

ಇದೆ ರೀತಿಯ ನಕಲಿ ಸುದ್ದಿಗಳು ಅನೇಕ ಜಿಲ್ಲೆಗಳಲ್ಲಿ ಭೀತಿ ಹುಟ್ಟಿಸಿದೆ, ಪಾರ್ಥಿ ಗ್ಯಾಂಗ್ ಗೆ ಸೇರಿದವರು ಎಂಬ ಅನುಮಾನದ ಮೇಲೆ ಹಲವು ಅಮಾಯಕರ ಮೇಲೆ ಹಲ್ಲೆ ನಡೆದಿದೆ, ಈ ರೀತಿ ಹಲ್ಲೆ ನಡೆದ ಹಲವಾರು ಘಟನೆಗಳು ನಡೆದ ಕಾರಣ ಪೊಲೀಸರು ಸಾಮಾಜಿಕ ಮಾಧ್ಯಮದ ಮೂಲಕ ನಕಲಿ ಸಂದೇಶಗಳನ್ನು ಕಳುಹಿಸುವ ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.  .

ಮೇ ಮೊದಲ ವಾರದಲ್ಲಿ ಕಡಪದಲ್ಲಿ ಮಾನಸಿಕ ಅನಾರೋಗ್ಯದ ವ್ಯಕ್ತಿಯೊಬ್ಬ ಗುಂಪಿನ ಸದಸ್ಯನಾಗಿದ್ದಾನೆಂದು ಬಂದ ವದಂತಿಯ ನಕಲಿ ಸಂದೇಶ ನಂಬಿ ಸಾರ್ವಜನಿಕರು, ಕೃಷ್ಣ ಜಿಲ್ಲೆಯಲ್ಲಿ  ಸೋಮವಾರ ಇದೇ ರೀತಿಯ ಸಂಶಯಕ್ಕಾಗಿ ವಲಸಿಗ ಕಾರ್ಮಿಕರ ಮೇಲೆ ಆಕ್ರಮಣ ನಡೆಸಿದ್ದಾರೆ.

ಒಂದರ ಮೇಲೆ ಒಂದರಂತೆ ಈ ಘಟನೆಗಳು ಹೆಚ್ಚಾದಾಗ, ಪೋಲಿಸರು ಈ ರೀತಿಯ ನಕಲಿ ಸಂದೇಶಗಳನ್ನು ನಿಗ್ರಹಿಸಲು ಸಕ್ರಿಯವಾಗಿ ನಿಂತಿದ್ದಾರೆ.ಮೂವರು ಮಕ್ಕಳನ್ನು ಅಪಹರಿಸಿ ಮಿದುಳನ್ನು ಹೊರತೆಗೆದುಕೊಂಡು ತಿಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ  ನಕಲಿ ಸುದ್ದಿಯನ್ನು ಹರಡಿದವರ ತನಿಕೆ ನಡೆಸುತ್ತಿದೆ.ಮೇ ಎರಡನೇ ವಾರದಲ್ಲಿ ಹರಡಿದ್ದ ನಕಲಿ ಸಂದೇಶ ಇದಾಗಿದೆ .

ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶ ಕಳುಹಿಸುವವರ ವಿರುದ್ಧ ಕ್ರಮ – ಇಬ್ಬರ ಬಂಧನ

ಸೋಮವಾರ, ಓಂಗೋಲ್ ಉಪವಿಭಾಗ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪಾರ್ಥಿ ಗ್ಯಾಂಗ್ ನ ಎಂದು ನಕಲಿ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ ಭಯವನ್ನು ಹರಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಕೃಷ್ಣ ಜಿಲ್ಲೆಯ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡುವ ಸಾಮಾಜಿಕ ಮಾಧ್ಯಮದ ಬಗೆಗಿನ ಸುಸ್ಪಷ್ಟ ವದಂತಿಗಳನ್ನು ಸುತ್ತುವರಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಂತಹ ಯಾವುದೇ ಗುಂಪಿನ ಯಾವುದೇ ಚಲನೆಯಿಲ್ಲ ಮತ್ತು ಜನರು ಅಂತಹ ಯಾವುದೇ ವದಂತಿಯನ್ನು ನಂಬಬಾರದು ಎಂದು ಸ್ಪಷ್ಟೀಕರಣವನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ಪೂರ್ವ ಗೋದಾವರಿ ಎಸ್ಪಿ ವಿಶಾಲ್ ಗುನ್ನಿ ಅವರು ನಕಲಿ ಮಾಹಿತಿ ಹರಡದಂತೆ ಹಾಗೂ ಜನರು ಇದನ್ನು ನಂಬದಂತೆ ಜಾಗೃತಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

“ಇಂತಹ ವದಂತಿಗಳನ್ನು ದಯವಿಟ್ಟು ನಂಬಬೇಡಿ, ಬಿಹಾರದಿಂದ ಬಂದಂತಹ ಯಾವುದೇ ಗುಂಪು ಇಲ್ಲ, ಮಕ್ಕಳನ್ನು ಯಾರೂ ಅಪಹರಿಸಲಿಲ್ಲ , ನಿಮ್ಮ ಕೈಗೆ ಕಾನೂನನ್ನು ತೆಗೆದುಕೊಳ್ಳಬೇಡಿ, ಅಮಾಯಕರ ಮೇಲೆ ಹಲ್ಲೆ ನಡೆಸಬೇಡಿ, ನಿಮಗೆ ಯಾವುದೇ ನೈಜ ಮಾಹಿತಿ ಇದ್ದರೆ ದಯವಿಟ್ಟು ಸಹಾಯವಾಣಿ 100 ಗೆ ಕರೆ ಮಾಡಿ ” ಎಂದು ವೀಡಿಯೊ ವಿವರಿಸುತ್ತದೆ.

ಗದ್ವಾಲ್ ಪೊಲೀಸರು ಕಾರ್ಯಕ್ರಮದ ಮೂಲಕ ನಕಲಿ ಸುದ್ದಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – National NewsNational News LatestKarnataka Crime News – Kannada News

WebTitle- ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶ ಕಳುಹಿಸುವವರ ವಿರುದ್ಧ ಕ್ರಮ – Andhra Pradesh Telangana Cops Efforts Tackle Fake News Sender

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!