ಸಿನಿಮಾ ನಟಿಗೆ ಅಪಘಾತ-ಕಿರುಚಾಡಿದರು ಸಹಾಯಕ್ಕೆ ಬರಲಿಲ್ಲ ಜನ

Kannada News (itskannada) ಸಿನಿಮಾ ನಟಿಗೆ ಅಪಘಾತ-ಕಿರುಚಾಡಿದರು ಸಹಾಯಕ್ಕೆ ಬರಲಿಲ್ಲ ಜನ.

ಕಾರು ಅಪಘಾತವಾಗಿ ನರಳಾಡ್ತಾಯಿದ್ದ ಸಿನಿಮಾ ನಟಿಯ ಸಹಾಯಕ್ಕೆ ಯಾರೂ ಮುಂದಾಗದೆ ಇರುವ ಘಟನೆ ಕೇರಳದ ಎರ್ನಾಕುಲಂ ನಲ್ಲಿ ನಡೆದಿದೆ. ನಟಿ ಮೇಘಾ ತನ್ನ ಸೋದರನ ನಿಶ್ಚಿತಾರ್ಥಕ್ಕೆ ತೆರಳುವ ವೇಳೆ ಈ ಅವಗಡ ಸಂಭವಿಸಿದ್ದು ಕೊನೆಗೆ ಫೋಟೋಗ್ರಾಪರ್ ಒಬ್ಬ ಅವರ ಸಹಾಯಕ್ಕೆ ಬಂದನೆನ್ನಲಾಗಿದೆ.

ನಟಿ ಗೆ ಅಪಘಾತವಾದ ಸಂದರ್ಭ ಪ್ರತ್ಯಕ್ಷ ದರ್ಶಿಗಳು ಅವರು ಸತ್ತೇ ಹೋದರೆಂದು , ಅವರ ಸಹಾಯಕ್ಕೆ ಯಾರೂ ಮುಂದಾಗಲಿಲ್ಲ , ಆದರೆ ನಟಿ ಮೇಘಾ ರವರ ಕಾರಿಗೆ ಅಳವಡಿಸಿದ್ದ ಏರ್ ಸೇಪ್ಟಿ ಅವರನ್ನು ಬದುಕುಲಿಯುವಂತೆ ಮಾಡಿತು.

ಅಪಘಾತದ ಬಳಿಕ ನಟಿ ಪ್ರಜ್ಞಾ ಹೀನರಾಗಿದ್ದು , ಅದನ್ನು ಗಮನಿಸಿದ ಜನರು ಸತ್ತೇ ಹೋಗಿದ್ದಾರೆಂದು ಕೊಂಡಿದ್ದರು, ಕೊನೆಗೆ ಅಲ್ಲಿನ ಫೋಟೋಗ್ರಾಪರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದನೆನ್ನಲಾಗಿದೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ , ” ಅಪಘಾತದ ನಂತರ ನಾನು ತುಂಬಾ ಹೆದರಿದ್ದೆ, ಮೂರು ಆಸ್ಪತ್ರೆ ಸುತ್ತಿದೆವು , ಒಂದರಲ್ಲಿ ಯಾರೂ ಇರಲಿಲ್ಲ , ಇನ್ನೊಂದು ಆಸ್ಪತ್ರೆ ಮುಚ್ಚಲಾಗಿತ್ತು , ಎಂದಿದ್ದಾರೆ, ಇನ್ನು ನಟಿ ಮೇಘಾ ತಲೆಗೆ ಪೆಟ್ಟಾಗಿದ್ದು ಅವರು ಚಿಕೆತ್ಸೆ ಪಡೆಯುತ್ತಿದ್ದಾರೆ, ////

actress-megha-mathew-injured-in-car-accident – ಸಿನಿಮಾ ನಟಿಗೆ ಅಪಘಾತ-ಕಿರುಚಾಡಿದರು ಸಹಾಯಕ್ಕೆ ಬರಲಿಲ್ಲ ಜನ