ಭೀಕರ ಅಪಘಾತ, 17 ಮಂದಿಯ ದುರ್ಮರಣ, 35ಮಂದಿಗೆ ಗಂಭೀರ ಗಾಯ

0 58

Kannada News (itskannada) ಉತ್ತರಪ್ರದೇಶ: ಭೀಕರ ಅಪಘಾತ, 17 ಮಂದಿಯ ದುರ್ಮರಣ, 35ಮಂದಿಗೆ ಗಂಭೀರ ಗಾಯ .

ಭೀಕರ ಅಪಘಾತ, 17 ಮಂದಿಯ ದುರ್ಮರಣ, 35ಮಂದಿಗೆ ಗಂಭೀರ ಗಾಯ

ಉತ್ತರಪ್ರದೇಶದ ಮಣಿಪುರ ಜಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿ, 17 ಮಂದಿ ಸಾವನ್ನಪ್ಪಿದ್ದು, 35ಮಂದಿಗೆ ಗಂಭೀರ ಗಾಯವಾಗಿದೆ. ಬಸ್ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ, ಈ ದುರಂತ ಸಂಭವಿಸಿದೆ.ಬುಧವಾರ ಬೆಳಗ್ಗೆ 5 ಗಂಟೆಗೆ ಜಿಲ್ಲೆಯ ಕಿರಾತ್ಪುರ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.

ಬಸ್ ರಾಜಸ್ತಾನದ ಜೈಪುರದಿಂದ ಉತ್ತರ ಪ್ರದೇಶದ ಫರುಖಾಬಾದ್ಗೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಗಡ ಸಂಭವಿಸಿದೆ.ಚಾಲಕನ ನಿಯಂತ್ರಣವನ್ನು ಕಳೆದುಕೊಂಡ ಬಸ್ ರಸ್ತೆಯ ವಿಭಾಜಕಕ್ಕೆ ಅಪ್ಪಳಿಸಿ 17 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂರು ಮಂದಿ ತೀವ್ರತರವಾದ ಸ್ಥಿತಿಯಲ್ಲಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಬಸ್ ನ ಚಾಲಕ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ////

Keyword : At least 17 people have been killed and 35 injured after a bus hit road divider and overturned at Manipur district in Uttar Pradesh – Accident in Uttar Pradesh : Bus hits Divider, Overturns in Manipur | 17 Lost Their Lives – ಭೀಕರ ಅಪಘಾತ, 17 ಮಂದಿಯ ದುರ್ಮರಣ, 35ಮಂದಿಗೆ ಗಂಭೀರ ಗಾಯ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!