ದಲಿತರ ಮನೆಯಲ್ಲಿ ಊಟ ಮಾಡುವುದು,ಬಿಜೆಪಿ ತಂತ್ರ-ಮೋಹನ ಭಾಗವತ್

28

National News (itskannada) ರಾಷ್ಟ್ರೀಯ ಸುದ್ದಿ-ಹೊಸದಿಲ್ಲಿ: ದಲಿತ ಕುಟುಂಬದ ಜೊತೆ ಊಟ ಮಾಡಿ ಅವರನ್ನು ಒಲಿಸಿಕೊಳ್ಳುವುದು ಬಿಜೆಪಿಯ ನಾಟಕ ಎಂದು ಆರ್’ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ದಲಿತ ಕೇರಿಗಳಿಗೆ ಹೋಗಿ ಅವರ ಮನೆಯಲ್ಲಿ ಊಟ ಮಾಡಿ ದಲಿತರನ್ನು ಒಲಿಸಿಕೊಳ್ಳುವ ಬಿಜೆಪಿ ತಂತ್ರವನ್ನು ಟೀಕಿಸಿ ದಲಿತರ ಮನೆಯಲ್ಲಿ ಊಟ ಮಾಡಿ ಮಾಧ್ಯಮದವರನ್ನು ಅಲ್ಲಿಗೆ ಕರೆತಂದು ಪ್ರಚಾರ ಪಡೆಯುವ ನಾಟಕವನ್ನು ಬಿಜೆಪಿ ನಿಲ್ಲಿಸಬೇಕಾಗಿದೆ ಎಂದರು.

ದಲಿತರನ್ನು ಒಲೈಸಬೇಕಾದರೆ ನಿರಂತರವಾಗಿ ದಲಿತ ನಾಯಕರನ್ನು ಭೇಟಿಯಾಗಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ದಲಿತ ಕುಟುಂಬದವರನ್ನು ನಮ್ಮ ಮನೆಗೆ ಆಹ್ವಾನಿಸಬೇಕು. ಜಾತಿ ವ್ಯವಸ್ಥೆಯಿಂದ ಹೊರ ಬರಲು ಸಹಾಯ ಮಾಡಬೇಕೆಂದು ಭಾಗವತ್ ಸಲಹೆ ನೀಡಿದ್ದಾರೆ.

ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯ ಅಂಗವಾಗಿ ಕಳೆದ ಕೆಲವು ವಾರಗಳಿಂದ ಬಿಜೆಪಿಯ ಸಚಿವರುಗಳು ಹಳ್ಳಿಗೆ ತೆರಳಿ ದಲಿತರ ಮನೆಯಲ್ಲಿ ಊಟ ಮಾಡಲಾರಂಭಿಸಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶದ ಸಚಿವ ಸುರೇಶ್ ರಾಣಾ ಅವರು ತನ್ನ ಮನೆಯಿಂದ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ಈ ಘಟನೆಯು ಭಾರೀ ವಿವಾದ ಹುಟ್ಟುಹಾಕಿತ್ತು.

ಕರ್ನಾಟಕದಲ್ಲಿ ಕೂಡ ಹಲವು ಬಿಜೆಪಿ ನಾಯಕರು ದಲಿತರ ಮನೆಯಲ್ಲಿ  ಊಟ ಮಾಡಿ ವಾಸ್ತವ್ಯ ಹೂಡಿದ್ದು ಹಲವು ವಿವಾದಕ್ಕೆ ಕಾರಣವಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – National News Latest – itskananda

ಹೊಸ ಪುಟ ಸೇರ್ಪಡೆ – TollyWood News Kannada

Open

error: Content is protected !!