ರಜನಿಕಾಂತ್ ಕರ್ನಾಟಕದ ದ್ರೋಹಿ-ವಾಟಾಳ್ ನಾಗರಾಜ್

Mysore (itskannada) ಮೈಸೂರು : ರಜನಿಕಾಂತ್ ಕರ್ನಾಟಕದ ದ್ರೋಹಿ-ವಾಟಾಳ್ ನಾಗರಾಜ್ : ಕರ್ನಾಟಕದಲ್ಲಿ, ಸೂಪರ್ ಸ್ಟಾರ್ ರಜನಿಕಾಂತ್ ರ ಬಾರೀ ನಿರೀಕ್ಷೆಯ ಚಿತ್ರ ‘ಕಾಳ’ ಬಿಡುಗಡೆ ಮಾಡಲು ಅವಕಾಶವಿಲ್ಲ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷ ಸಂಸ್ಥಾಪಕ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

ರಜನಿಕಾಂತ್ ಕರ್ನಾಟಕದ ದ್ರೋಹಿ-ವಾಟಾಳ್ ನಾಗರಾಜ್

ಶನಿವಾರ ಮಾಧ್ಯಮ ವ್ಯಕ್ತಿಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಜನಿಕಾಂತ್ ಕರ್ನಾಟಕದ ದ್ರೋಹಿ ಎಂದು ಆರೋಪಿಸಿದ್ದಾರೆ. ಅವರ ಚಲನಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅನುಮತಿಸಿದರೆ, ಕನ್ನಡ ಪರ ಸಂಘಟನೆಗಳು ಅವರ ವಿರುದ್ಧ ತೀವ್ರ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಕರ್ನಾಟಕದ ಜನರಿಗೆ ಅವರು ಎಂದೆಂದೂ ದ್ರೋಹಿಯೇ ಎಂದಿದ್ದಾರೆ. ಕೋರ್ಟ್ ನಿರ್ದೇಶನದಂತೆ ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಬೇಕೆಂದು ರಜನಿಕಾಂತ್ ಹೇಳಿರುವುದನ್ನು  ನೆನಪಿಸಿಕೊಳ್ಳಬಹುದು. ಅವರ ಈ ಹೇಳಿಕೆ ಕನ್ನಡ ಪರ ಕಾರ್ಯಕರ್ತರನ್ನು ಕೆರಳಿಸಿದ್ದು, ಅವರ ಚಿತ್ರವು ರಾಜ್ಯದಲ್ಲಿ ಬಿಡುಗಡೆ ಗೊಳ್ಳಬಾರದೆಂದು ನಿರ್ಧರಿಸಿದ್ದಾರೆ.

ರಜನಿಕಾಂತ್ ರ-ಕಾಳ ಜೂನ್ 7 ಬಿಡುಗಡೆಯಾಗಲಿದ್ದು, ಹುಮಾ ಖುರೇಷಿ, ಈಶ್ವರಿ ರಾವ್, ಧನುಷ್ ನಟಿಸಿದ್ದಾರೆ.ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. .. .. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Mysore News Online – Kannada News

Webtitle : ರಜನಿಕಾಂತ್ ಕರ್ನಾಟಕದ ದ್ರೋಹಿ-ವಾಟಾಳ್ ನಾಗರಾಜ್