ನಟ ದರ್ಶನ್‌ ವಿರುದ್ಧ ಜೆಡಿಎಸ್‌ ಕಾಯಕರ್ತರ ಪ್ರತಿಭಟನೆ

Protests against Darshan campaigning for Siddaramaiah

Mysore (itskannada) ಮೈಸೂರು: ನಟ ದರ್ಶನ್‌ ವಿರುದ್ಧ ಜೆಡಿಎಸ್‌ ಕಾಯಕರ್ತರ ಪ್ರತಿಭಟನೆ : Protests against Darshan campaigning for Siddaramaiah : ರಾಜ್ಯರಾಜಕಾರಣ ದಿನದಿಂದ ದಿನಕ್ಕೆ ಬಿರುಸಾಗುತ್ತಿದೆ, ಪಕ್ಷಗಳು ಒಂದಿಲ್ಲಾ ಒಂದು ಸರ್ಕಸ್ ಗಳನ್ನು ಮಾಡುತ್ತಲೇ ಇವೆ. ಸಿನಿಮಾ ನಟರು ಕೂಡ ಸಿಎಂ ಪರ ಪ್ರಚಾರ ನಡೆಸುತ್ತಿದ್ದಾರೆ.
 ನಟ ದರ್ಶನ್‌, ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದು, ನಾಗನಹಳ್ಳಿಯಲ್ಲಿ  ಜೆಡಿಎಸ್‌ ಕಾಯಕರ್ತರು ಪ್ರತಿಭಟನೆ ನಡೆಸಿ ವಿರೋಧ ತೋರಿದ್ದಾರೆ. ಅಂಬರೀಷ್‌ ಅವರ ಸಚಿವ ಸ್ಥಾನ ಕಿತ್ತುಕೊಂಡಾಗ ಯಾಕೆ ಮಾತನಾಡಲಿಲ್ಲ, ಕಾವೇರಿ ಪರ ಹೋರಾಟ ಯಾಕೆ ಮಾಡಲಿಲ್ಲ ಎಂದು ಪ್ರತಿಭಟನಾ ನಿರತರು ದರ್ಶನ್‌ ಅವರನ್ನು ಪ್ರಶ್ನಿಸಿದ್ದಾರೆ.
 ನಾಗನಹಳ್ಳಿಯಲ್ಲಿ ಸಿಎಂ ಪರ ನಟ ದರ್ಶನ್ ಮತಯಾಚಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಧರಣಿ ಕುಳಿತು ದರ್ಶನ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News  – Kannada News – Karnataka News –  Mysore News Online