ಕೆ.ಎಸ್.ಆರ್.ಟಿ.ಸಿ ಯಲ್ಲಿ ಸಾಗಿಸುತ್ತಿದ್ದ 50 ಲಕ್ಷ ಹಣ ವಶ

police officials have seized over Rs 50 Lakh

34
ಸಾಂಧರ್ಭಿಕ ಚಿತ್ರ

Mysore (itskannada) ಮೈಸೂರು: ಕೆ.ಎಸ್.ಆರ್.ಟಿ.ಸಿ ಯಲ್ಲಿ ಸಾಗಿಸುತ್ತಿದ್ದ 50 ಲಕ್ಷ ಹಣ ವಶ-police officials have seized over Rs 50 Lakh  : ಕರ್ನಾಟಕದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಎಲ್ಲೆಡೆ ಕಣ್ಣಿಟ್ಟಿದ್ದಾರೆ, ಅಂತೆಯೇ ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಾಗಿಸಲಾಗುತ್ತಿದ್ದ 50 ಲಕ್ಷ ರುಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು-ಹುಣಸೂರು ರಾಜ್ಯ  ಹೆದ್ದಾರಿಯ ಮನುಗನಹಳ್ಳಿ ಚೆಕ್-ಪೋಸ್ಟ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ತಪಾಸಣೆ ನಡೆಸಿದಾಗ , ರೂ 2000 ಮತ್ತು ರೂ 500ರೂ. ನೋಟುಗಳ ಸುಮಾರು  50 ಲಕ್ಷ ನಗದು ಪತ್ತೆಯಾಗಿದೆ, ಹಣ ಮೂಲವನ್ನು ಕಂಡುಹಿಡಿಯಲು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯೊಂದಿಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಪೋಲಿಸ್ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. //

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –  Mysore News Online – Politics News – Karnataka Politics News – Crime News – Karnataka Crime News – Kannada News

Open

error: Content is protected !!