ಮೈಸೂರು-SSLC ಯಲ್ಲಿ ಮಗಳು ಫೇಲ್-ತಾಯಿ ಆತ್ಮಹತ್ಯೆ

30

Mysore (itskannada) ಮೈಸೂರು-SSLC ಯಲ್ಲಿ ಮಗಳು ಫೇಲ್-ತಾಯಿ ಆತ್ಮಹತ್ಯೆ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಗಳು ಫೆಲ್ ಆಗಿದ್ದಕ್ಕೆ ಮನನೊಂದ ತಾಯಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಇಲವಾಲದಲ್ಲಿ ಈ ಘಟನೆ ನಡೆದಿದೆ.  ಇಲವಾಲ ನಿವಾಸಿ ರಾಜು ಎಂಬವರ ಪತ್ನಿ ಲಕ್ಷ್ಮಿ ಎಂಬುವವರು ನೇಣಿಗೆ ಶರಣಾದ ಮಹಿಳೆ.

ಮೊನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಆದರೆ ಪರೀಕ್ಷೆಯಲ್ಲಿ ಲಕ್ಷ್ಮೀ ಅವರ ಪುತ್ರಿ ಫೇಲ್ ಆಗಿದ್ದಳು. ಇದರಿಂದ ಮನನೊಂದು  ಲಕ್ಷ್ಮೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹ್ಯತೆಗೆ ಶರಣಾಗಿದ್ದಾರೆ. ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷೆಯಲ್ಲಿ ಫೇಲ್ ಆದರೇ ಫೇಲ್ ಆದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲಿ ತಾಯಿಯೇ ಮಗಳು ಅನುತೀರ್ಣಲಾಗಿದ್ದಕ್ಕೆ ಸಾವಿಗೆ ಶರಣಾಗಿರುವುದು ಬೇಸರದ ಸಂಗತಿಯಾಗಿದೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Mysore News Online – Crime News – Karnataka Crime News

Open

error: Content is protected !!