ವಿಜಯೇಂದ್ರ ಬೆಂಬಲಿಗರು ಪ್ರತಿಭಟನೆಗೆ ಸಿದ್ಧತೆ-ಅಮಿತ್ ಶಾ ವರುಣಾ ಪ್ರವಾಸ ರದ್ದು

Amith Shah Cancels To Visit Varuna

Mysore-Politics (itskannada) ಮೈಸೂರು : ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಬಿ.ಜೆ.ಪಿ ಅಧ್ಯಕ್ಷ ಅಮಿತ್ ಶಾ ವರುಣಾದಲ್ಲಿ ನಡೆಸಬೇಕಿದ್ದ ಬಹಿರಂಗ ಸಭೆಯನ್ನು ಕೈಬಿಟ್ಟಿದ್ದಾರೆ.ಮೈಸೂರಿನ ಚುನಾವಣಾ ಪ್ರಚಾರದ ನಡುವೆ ವರುಣಾ ಕ್ಷೇತ್ರಕ್ಕೂ ಬೇಟಿ ನೀಡಿ  ವರುಣಾ ಕ್ಷೇತ್ರದ ಸುಮಾರು 16 ಗ್ರಾಮಗಳಿಗೆ ಬೇಟಿ ನೀಡಿ ಬಹಿರಂಗ ಸಭೆ ನಡೆಸಲಾಗುತ್ತದೆ ಎಂಬ ಮಾಹಿತಿಯಿತ್ತು.

ಆದರೇ ವರುಣಾ ಕ್ಷೇತ್ರಕ್ಕೆ ಟಿಕೆಟ್ ವಂಚಿತ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರ ಬೆಂಬಲಿಗರ ಪ್ರತಿಭಟನೆ ಸಿದ್ದತೆ ವಿಷಯ ತಿಳಿದು ,ವರುಣಾದಲ್ಲಿ ನಡೆಸಬೇಕಿದ್ದ ಬಹಿರಂಗ ಸಭೆಯನ್ನು ಕೈಬಿಟ್ಟಿದ್ದಾರೆ

ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಬಿವೈ ವಿಜಯೇಂದ್ರ ಬೆಂಬಲಿಗರು ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಹೀಗಾಗಿ ಅಮಿತ್ ಶಾಗೆ ಮುಜುಗರವಾಗುವ ಸಾಧ್ಯತೆಯಿತ್ತು. ಹೀಗಾಗಿ ಅಮಿತ್ ಶಾ ವರುಣಾದಲ್ಲಿ ಪ್ರಚಾರ ನಡೆಸದೇ ಇರಲು ತೀರ್ಮಾನಿಸಿದ್ದಾರೆ. ಹಾಗೂ ಉಳಿದಂತೆ ಕಾರ್ಯಕ್ರಮದ ಪಟ್ಟಿಯಲ್ಲಿಯಂತೆ ಮುಂದುವರೆಯಲಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Mysore News Online – Karnataka Politics News – Kannada News

ಹೊಸಪುಟ ಸೇರ್ಪಡೆ : TollyWood News Kannada