ಚುನಾವಣಾ ಪ್ರಚಾರಕ್ಕಿಳಿದ ನಟ ದರ್ಶನ್-ವರ್ಕ್ ಔಟ್ ಆಗುತ್ತಾ…

Actor Darshan Starts Election Campaign | itskannada

Politics News-Mysore (itskannada) ಮೈಸೂರು : ಚುನಾವಣಾ ಪ್ರಚಾರಕ್ಕಿಳಿದ ನಟ ದರ್ಶನ್-ವರ್ಕ್ ಔಟ್ ಆಗುತ್ತಾ  : ಹಲವು ಸ್ಯಾಂಡಲ್ ವುಡ್ ನಟರು ಅದಾಗಲೆ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ, ಸುದೀಪ್ , ದರ್ಶನ್, ಗಣೇಶ್ , ಪೂಜಾಗಾಂಧಿ, ಮತ್ತು ಯಶ್ ಇನ್ನೂ ಕೆಲವರು ರೋಡ್ ಶೋ , ಭಾಷಣ, ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚುನಾವಣಾ ಪ್ರಚಾರಕ್ಕಿಳಿದ ನಟ ದರ್ಶನ್-ವರ್ಕ್ ಔಟ್ ಆಗುತ್ತಾ . . .

ಯಶ್ ತಾವು ರಾಜಕೀಯಕ್ಕಿಳಿಯುವುದಿಲ್ಲ ಎಂದು ಆಗಲೇ ಅವರು ಸ್ಪಷ್ಟಪಡಿಸಿದ್ದರು. ಅದರೆ, ತಮಗೆ ಅರ್ಹವೆನಿಸುವ ಅಭ್ಯರ್ಥಿಗಳ ಪರ ಪಕ್ಷಾತೀತವಾಗಿ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದರು.

ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸಿಎಂ ಪರವಾಗಿ ಇಂದು ಪ್ರಚಾರ ಮಾಡಲಿದ್ದಾರಂತೆ.
ನಟ ದರ್ಶನ್ ಅವರು ಮೂಲತಃ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕೂಡ ಕಾಂಗ್ರೆಸ್ ಮುಖಂಡರಾಗಿರುವುದರಿಂದ ದರ್ಶನ್ ಅವರು ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರಂತೆ. ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗುವ ದರ್ಶನ್ ಅವರ ಪ್ರಚಾರ ರಾತ್ರಿ 7.30ರ ವರೆಗೆ ಮುಂದುವರೆಯಲಿದ್ದು,  ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರಂತೆ.
ಒಟ್ಟಾರೆ ಮತದಾರರನ್ನು ಸೆಳೆಯಲು ರಾಜ್ಯ ರಾಜಕಾರಣವು ಹಲವು ತಂತ್ರಗಳನ್ನು ಬಳಸುತ್ತಿವೆ , ಗೆಲ್ಲಲೇ ಬೇಕು ಎಂಬ ಹಟದಿಂದ ಪಕ್ಷದಿಂದ ಪಕ್ಷಕ್ಕೆ ಪೈಪೋಟಿ ಬಿರುಸಾಗಿದೆ…..//

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ -Mysore News Online – Karnataka Politics News – Kannada News – Karnataka News