ಪೋಲೀಸರ ಸೋಗಿನಲ್ಲಿ 2.25 ಲಕ್ಷ ವಂಚನೆ

stolen the money 2.25 lakh-posing as police

Mangalore (itskannada) ಮಂಗಳೂರು: ಪೋಲೀಸರ ಸೋಗಿನಲ್ಲಿ 2.25 ಲಕ್ಷ ವಂಚನೆ-stolen the money 2.25 lakh-posing as police : ಐವರು ವ್ಯಕ್ತಿಗಳ ತಂಡವು ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ  2.25 ಲಕ್ಷ ರೂ. ಮತ್ತು 2 ಮೊಬೈಲ್ ಗಳನ್ನೂ ವಂಚಿಸಿದ್ದಾರೆ.ಈ ಘಟನೆ 4 ರಂದು ಮಿಷನ್ ಸ್ಟ್ರೀಟ್ ನಲ್ಲಿ ನಡೆದಿದೆ.

ವರದಿಯಾಗಿರುವಂತೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ವಂಚಕರು , ಯಾಕುಬ್ ಅವರ ಸ್ಕೂಟರ್ ಅನ್ನು ತಡೆದಿದ್ದಾರೆ, ಪೋಲಿಸರ ಸೋಗಿನಲ್ಲಿದ್ದ ವಂಚಕರನ್ನು ನಿಜವಾದ ಪೋಲಿಸರೆನ್ದುಕೊಂಡು ಯಾಕುಬ್ ಗಾಡಿಯನ್ನು ನಿಲ್ಲಿಸಿದ್ದಾರೆ. ವಾಡಿಕೆಯ ಶೋಧ ನಡೆಸುವ ನೆಪ ಹೇಳಿ ಗಾಡಿಯಲ್ಲಿದ್ದ 2.25 ಲಕ್ಷ ರೂ.ಗಳನ್ನು  ಮತ್ತು ಮೊಬೈಲ್ ಗಳನ್ನೂ ಕದ್ದಿದ್ದಾರೆ. ಮನೆಗೆ ಮರಳಿದಾಗ ಸ್ಕೂಟರ್ನಲ್ಲಿದ್ದ ಹಣವನ್ನು ಕಳೆದುಹೋಗಿರುವುದನ್ನು ಯಾಕುಬ್ ಅರಿತುಕೊಂಡಿದ್ದಾರೆ.

ನಂತರ, ಅವರು ಕಾಣೆಯಾದ ನಗದು ಬಗ್ಗೆ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ.  ಈ ಎಲ್ಲಾ ಘಟನೆಯು ಸಿ.ಸಿ.ಟಿ.ವಿ ಯಲ್ಲಿ ರೆಕಾರ್ಡ್ ಆಗಿದ್ದು , ಪೊಲೀಸರು ವಂಚಕರಿಗೆ ಬಲೆಬಿಸಿದ್ದಾರೆ. // ಈ ವಿಭಾಗದ ಇನಾಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News –  Kannada News – Karnataka News –  Mangalore News Online