ಕನಸು ಕಣ್ಣು ತೆರೆದಾಗ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ನೀರಲ್ಲಿ ಮುಳುಗಿ ಸಾವು

0 177

Mangalore (itskannadaಮಂಗಳೂರು: ಕನ್ನಡದ ನಿರ್ದೇಶಕ ಸಂತೋಷ್ ಫೋಟೋ ಶೂಟ್‍ಗಾಗಿ ತೆರಳಿ ಫಾಲ್ಸ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದ್ದು ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ನೀರಿನ ಹರಿಯುವಿಕೆ ಹೆಚ್ಚಾಗಿತ್ತು ಈ ವೇಳೆ ಕಾಲು ಜಾರಿಬಿದ್ದ ನಿರ್ದೇಶಕ ಸಂತೋಷ್ ಶೆಟ್ಟಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಸಂತೋಷ್ ಸೇರಿದಂತೆ ಐವರ ತಂಡ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಗೆ ಫೋಟೋ ಶೂಟ್‍ಗೆ ತೆರಳಿದ್ದ ವೇಳೆ ಈ ಒಂದು ದುರ್ಘಟನೆ ನಡೆದಿದೆ. 2015ರಲ್ಲಿ ‘ಕನಸು ಕಣ್ಣು ತೆರೆದಾಗ’ ಎಂಬ ಸಿನಿಮಾ ಜೊತೆಗೆ ,ಗಂಧದ ಕುಡಿ ಚಿತ್ರವನ್ನು ಸಂತೋಷ್ ನಿರ್ದೇಶಿಸಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಸಂತೋಷ್ ಮೃತ ದೇಹಕ್ಕಾಗಿ ಶೋಧನೆ ಕಾರ್ಯ ಕೈಗೊಂಡಿದ್ದಾರೆ. /// Mangalore News Online ಕನಸು ಕಣ್ಣು ತೆರೆದಾಗ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ನೀರಲ್ಲಿ ಮುಳುಗಿ ಸಾವು-itskannada

 

 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!