ವರುಣಾ ಕ್ಷೇತ್ರದಿಂದ ಬಿಎಸ್ ವೈ ಪುತ್ರ  ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ

Vijayendra Will Not Contest From Varuna | Mysore News

Mysore : (itskannada) ವರುಣಾ ಕ್ಷೇತ್ರದ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. ಹೆಜ್ಜೆ ಹೆಜ್ಜೆಗೆ ರಾಜಕೀಯದ ಅದಲು ಬದಲು ಆಟ ಶುರುವಾಗಿದೆ. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ  ಎಂದು ಘೋಷಿಸಿದ್ದಾರೆ.

ವರುಣಾ ಕ್ಷೇತ್ರದಿಂದ ಬಿಎಸ್ ವೈ ಪುತ್ರ  ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ .

ವರುಣಾ ಕ್ಷೇತ್ರದಿಂದ ಸಿಎಂ ಸಿದ್ಧರಾಮಯ್ಯ ಕಣಕ್ಕಿಳಿದಿರುವ  ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆಂದೇ ಘೋಷಿಸಲಾಗಿತ್ತು. ಸೋಮವಾರ ನಾಮಪತ್ರ ಸಲ್ಲಿಸಲು ಸಿದ್ದತೆ ನಡೆದಿತ್ತು. ಆದರೆ, ನಂಜನಗೂಡಿನಲ್ಲಿ ಇಂದು ನಡೆದ ಸಮಾವೇಶದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ  ಎಂದು ಘೋಷಿಸಿದ್ದಾರೆ.

ಯಡಿಯೂರಪ್ಪ  ಈ ಘೋಷಣೆ ಮಾಡುತ್ತಿದ್ದಂತೆಯೇ ರೊಚ್ಚಿಗೆದ್ದ ಕಾರ್ಯಕರ್ತರು ತಕ್ಷಣ  ಗದ್ದಲ  ಎಬ್ಬಿಸಿದರು. ಕಾರ್ಯಕರ್ತರ  ಆಕ್ರೋಷಕ್ಕೆ ಕುರ್ಚಿಗಳೆಲ್ಲ ಪುಡಿಪುಡಿಯಾದವು. ಗದ್ದಲ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.

ಬಿಜೆಪಿಯ  ಈ ದಿಢೀರ್ ನಡೆಗೆ  ಕಾರಣ ಏನು ಎಂಬುದು ಕುತೂಹಲ ಮೂಡಿಸಿದ್ದು, ಯತೀಂದ್ರ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಯೂ ಕಾಡತೊಡಗಿದೆ. |itskannada