ಆರ್.ಸಿ.ಬಿ ಮತ್ತು ಸಿ.ಎಸ್.ಕೆ ಪಂದ್ಯದ ಸಮಯದಲ್ಲಿ 10 ಬೈಕ್ ಕಳವು

ten bikes stolen in the time during RCB-CSK match

Crime News ( itskannada) ಬೆಂಗಳೂರು: ಏಪ್ರಿಲ್ 25 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ)ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿ.ಎಸ್.ಕೆ) ತಂಡಗಳ ನಡುವಿನ ಇತ್ತೀಚಿನ ಟಿ 20 ಪಂದ್ಯವು ತಮ್ಮ ಸ್ಥಾನಗಳ ತುದಿಯಲ್ಲಿ ಪ್ರೇಕ್ಷಕರನ್ನು ಹೊಂದಿದ್ದವು.  ಆದಾಗ್ಯೂ, ಸ್ಥಳದಲ್ಲಿ ನೆರೆದಿದ್ದವರು ಪ್ರೇಕ್ಷಕರು ಮಾತ್ರವಲ್ಲದೆ, ಬೈಕು ಕಳ್ಳರು ಕೂಡ ಪ್ರೇಕ್ಷಕರ ಸೋಗಿನಲ್ಲಿ ಸಮಯಕ್ಕಾಗಿ ಹೊಂಚು ಹಾಕಿ ಕೂತಿದ್ದರು, ಪ್ರೆಕ್ಷ್ಕರೆಲ್ಲಾ ಉತ್ಸುಕರಾಗಿರುವ ಸಮಯವನ್ನು ನೋಡಿ ಸುಮಾರು ಹತ್ತು ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ.

ದೂರುದಾರ ನರೇಂದ್ರಬಾಬು ಹೇಳುವಂತೆ, “ನಾನು ಆರ್.ಸಿ.ಬಿ ಇನ್ನಿಂಗ್ಸ್ ಬಳಿಕ ಬಂದಾಗ ನನ್ನ ಬೈಕು ಕಾಣಲಿಲ್ಲ. ಆದರೆ ಆ ಜಾಗದಲ್ಲಿ ರಾಯಲ್ ಎನ್ಫೀಲ್ಡ್ ನಿಲುಗಡೆಯಾಗಿತ್ತು. ಸುಮಾರು ಅರ್ಧ ಘಂಟೆಗಳ ಕಾಲ ನನ್ನ ಬೈಕನ್ನು ಹುಡುಕಿದ ನಂತರ ಅದೇ ಸ್ಥಳಕ್ಕೆ ಮರಳಿ ಬಂದಾಗ ಅಲ್ಲಿದ್ದ ಎನ್ಫೀಲ್ಡ್ ಬೈಕು ಕೂಡ ಕಾಣೆಯಾಗಿತ್ತು. ”

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಬೈಕು ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇಂದು ನಡೆದ ಪಂದ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸ – Karnataka Crime News – Kannada Crime News – Kannada News – Karnataka News