ಬಸ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಬಂಧನ

Police detained seven in connection with the bus hijacking

Crime News 🙁 itskannada ) ಬೆಂಗಳೂರು: ಖಾಸಗಿ ಸಂಸ್ಥೆಯ ಬಸ್ಸನ್ನು ಅಪಹರಿಸಿದ್ದ 7 ಜನರನ್ನು ಭಾನುವಾರ, ಏಪ್ರಿಲ್ 29 ರಂದು  ಪೊಲೀಸರು ಬಂಧಿಸಿದ್ದಾರೆ.  ಶುಕ್ರವಾರ ಖಾಸಗಿ ಬಸ್ಸಿನ ಅಪಹರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸುವಲ್ಲಿ ಪೊಲೀಸರು    ಯಶಸ್ವಿಯಾಗಿದ್ದಾರೆ.

ಬಂಧಿತರಾದವರಲ್ಲಿ ಮೂವರು ಸಾಲ ವಸೂಲಿ ಮಾಡಲು ನೆಮಕಗೊದವರಾಗಿದ್ದು , ಅವರು ಈ ಬಸ್ಸಿನ ಕಂಪೆನಿಯು ಸಾಲವನ್ನು ಪಾವತಿಸದಿದ್ದ ಕಾರಣ ವಾಹನವನ್ನು ವಶಪಡಿಸಿಕೊಳ್ಳಲು ನೇಮಕಗೊಂಡವರು. ಅವರನ್ನು ನೇಮಕ ಮಾಡಿಕೊಂಡ ಸಂಸ್ಥೆಯ ಮಾಲೀಕರಾದ ಚಿಕ್ಕರಂಗೇ ಗೌಡ (48)ರವರನ್ನು ಕೂಡ ಭಾನುವಾರ ಬಂಧಿಸಲಾಯಿತು.

ಬಂಧಿತರು ಪೊಲೀಸ್ ಅಧಿಕಾರಿಗಳೆಂದು ಶುಕ್ರವಾರ ಮೈಸೂರು ರಸ್ತೆಯ ಬಸ್ಸನ್ನು ತಡೆದು, ಬಸ್ಗೆ ಹತ್ತಿದರು ಮತ್ತು ಆರ್.ಆರ್.ನಗರದ ತಮ್ಮ ಗೋಡಾನ್ಗೆ ಕೊಂಡೊಯ್ದಿದ್ದರು.

ಪ್ರಯಾಣಿಕರನ್ನು ರಕ್ಷಿಸಲು ಪೋಲಿಸ್ ಗೋಡಾನ್ ಅನ್ನು ಸುತ್ತುವರೆದಾಗ ಅವರೆಲ್ಲಾ ತಪ್ಪಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಸ್ ಲಾಮಾ ಟ್ರಾವಲ್ಸ್ ಗೆ ಸೇರಿದ್ದು, Fullerton India ಎಂಬ ಸಂಸ್ಥೆಯಿಂದ ಸಾಲ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಬಂಧಿತರಲ್ಲಿ ನಾಲ್ವರು Fullerton India ದ ನೌಕರರು.

ಪೋಲಿಸ್ ಪ್ರಕಾರ, Fullerton India ಸಂಸ್ಥೆಯು , ಸಾಲ ವಸೂಲಿಗೆ ಗ್ಲೋಬಲ್ ಫೈನಾನ್ಸ್ ಸಂಸ್ಥೆಗೆ ಒಪ್ಪಂದ ಮಾಡಿಕೊಂಡಿತ್ತು.

ಭಾನುವಾರ, ಪೊಲೀಸರು ಗ್ಲೋಬಲ್ ಫೈನಾನ್ಸ್ ಆಫೀಸ್ ಮೇಲೆ ದಾಳಿ ನಡೆಸಿ, ಮಾಲೀಕನನ್ನು ಬಂಧಿಸಿದ್ದಾರೆ, // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ Karnataka Crime News – Karnataka News – Kannada News