ನಳಪಾಡ್ ನ್ಯಾಯಾಂಗ ಬಂಧನ ವಿಸ್ತರಣೆ

Nalapads judicial custody extended | itskannada

14

Kannada News : ( itskannada ) : ಬೆಂಗಳೂರು: ಸಧ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಗೂ  ಫೆಬ್ರುವರಿ 17 ರಂದು ಯುಬಿ ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ಕ್ರೂರವಾಗಿ ವಿದ್ವತ್ ಲೋಕನಾಥನ್ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಹ್ಯಾರಿಸ್ ನಳಪಾಡ್ ನ್ಯಾಯಾಂಗ ಬಂಧನವನ್ನು ಮತ್ತೊಮ್ಮೆ ಮೇ 11ರವರೆಗೆ ವಿಸ್ತರಿಸಲಾಗಿದೆ.

ನಳಪಾಡ್ ನ್ಯಾಯಾಂಗ ಬಂಧನ ವಿಸ್ತರಣೆ-Nalapads judicial custody extended

ಮೊಹಮ್ಮದ್ ಹ್ಯಾರಿಸ್ ನಳಪಾಡ್ ರವರ ಪರ ಕಾನೂನು ತಂಡವು ಹಾಗೂ ವಕೀಲರು ಚಾರ್ಜ್ ಶೀಟ್ ಸಲ್ಲಿಸಲು ವಿಳಂಬವಾಗುತ್ತಿರುವ ಕಾರಣ ಮುಂದಿಟ್ಟುಕೊಂಡು ಜಾಮೀನು ಪಡೆದುಕೊಳ್ಳಲು ಪ್ರಯತ್ನಿಸಿತು. ಮೊಹಮ್ಮದ್ ಹ್ಯಾರಿಸ್ ಪರ ವಕೀಲರು ವಾದಿಸಿ 60 ದಿನಗಳಲ್ಲಿ  ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಆರೋಪಿಗಳಿಗೆ ಜಾಮೀನು ನೀಡಲು ಅರ್ಹರೆಂದು ಅವರು ವಾದಿಸಿದರು. ಆದಾಗ್ಯೂ, ವಿದ್ವತ್ ಲೋಕನಾಥನ್ ಪರ ತಂಡವು ಅದು 60 ದಿನಗಳು ಅಲ್ಲ 90 ದಿನಗಳು ಎಂದು ಸ್ಪಷ್ಟಪಡಿಸಿದೆ.

ವಿದ್ವತ್ ಲೋಕನಾಥನ್ ಪರ ಕಾನೂನು ತಂಡವು 90 ದಿನದ ಕಾಲಾವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ,  ಈ ಘಟನೆಯ ತನಿಖೆ ನಡೆಯುತ್ತಿದೆ ಮತ್ತು ಹೇಳಿಕೆಗಳನ್ನು, ಸಾಕ್ಷಿಗಳು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿದ್ವತ್ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ ನಂತರ, ಸಾರ್ವಜನಿಕ ಪ್ರತಿಭಟನೆಯ ನಂತರ ಫೆಬ್ರವರಿಯಲ್ಲಿ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶರಣಾಗಿದ್ದರು. ಫೆಬ್ರವರಿ 17 ರಂದು ಕೆಫೆಯಲ್ಲಿ ಈ ಘಟನೆ ನಡೆದಿತ್ತು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ -Crime News – Karnataka Crime News – Karnataka News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!