ಕಾಲಾ ಗೆ ರಾಹುಕಾಲ-ಟೈಟ್ ಸೆಕ್ಯೂರಿಟಿ

Kannada News (itskannada) ಕಾಲಾಗೆ ರಾಹುಕಾಲ-ಟೈಟ್ ಸೆಕ್ಯೂರಿಟಿ : ದೇಶಾದ್ಯಂತ ಇಂದು ತೆರೆ ಕಾಣುತ್ತಿರುವ ರಜನೀಕಾಂತ್ ಅಭಿನಯದ ಕಾಲಾ ಚಿತ್ರಕ್ಕೆ ಕನ್ನಡ ಪರ ಸಂಘಟನೆ ವಿರೋಧ ವ್ಯಕ್ತ ಪಡಿಸಿವೆ. ಇದರಿಂದ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಯಲ್ಲಿ ಕಾಲಾ ಚಿತ್ರ ಆರಂಭವಾಗಿಲ್ಲ.ಬೆಳಿಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಕಾಲಾ ಚಿತ್ರ, ಇನ್ನು ಸದ್ದಿಲ್ಲದೇ ಇದೆ. ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನ ನಡೆಸೊಲ್ಲ ಎಂದಿದ್ದಾರೆ, ಪೋಲಿಸ್ ,ಪೋಲಿಸ್ ಸೆಕ್ಯೂರಿಟಿ ಅಂತ ಸಿನಿಮಾ ಬಿಡುಗಡೆ ಮಾಡಿದರೆ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಬಹುದು ಎಂದು ಥಿಯೇಟರ್  ಮಾಲೀಕರು ಸುಮ್ಮನಾಗಿದ್ದಾರೆ.

ಈ ನಡುವೆ ಚಿತ್ರ ಮಂದಿರದ ಬಳಿಗೆ ಬಂದ ಅನೇಕ ರಜನೀಕಾಂತ್ ಅಭಿಮಾನಿಗಳಿಗೆ ಮನವೊಲಿಸಲು ಪ್ರಯತ್ನಿಸಿದ ಕನ್ನಡ ಪರ ಸಂಘಟನೆಯು, ನಾವು ನೀವು ಎಂದೆಂದೂ ಅಣ್ಣ – ತಮ್ಮಂದಿರ ರೀತಿ , ದಯವಿಟ್ಟು ಈ ವಿಷಯದ ಬಗ್ಗೆ ನೀವು ಸಹಕರಿಸಿ ಎಂದು ಕೇಳಿದ್ದಾರೆ, ಅಲ್ಲದೇ ತಮಿಳು ನಾಡು ರೈತರ ಮೇಲೆ ಗೋಲಿಬಾರ್ ಆದಾಗ ನಮ್ಮ ಕರ್ನಾಟಕದಲ್ಲಿ ಅದರ ಬಗ್ಗೆ ಪ್ರತಿಭಾತಿಸಿದ್ದೇವೆ , ನಮ್ಮದು ಒಂದೇ ಬೇಡಿಕೆ , ದಯವಿಟ್ಟು ಈ ವಿಷಯದಲ್ಲಿ ನಮಗೆ ಸಹಕರಿಸಿ ಎಂದು ಕರ್ನಾಟಕ ರಜನೀಕಾಂತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಗರುಡಾ ಮಾಲ್,  ಮಂತ್ರಿಮಾಲ್, ಲಿಡೋ ಚಿತ್ರಮಂದಿರದಲ್ಲಿ ಬಹಳ ಪೊಲೀಸ್ ಬಿಗಿ ಬಂದೊಂಬಸ್ತ್ ಮಾಡಲಾಗಿದ್ದು ಕಾಲಾ ಚಿತ್ರಕ್ಕೆ ರಾಹು ಕಾಲ ಆರಂಭವಾಗಿದೆ ಅಂಥ ಹೇಳಬಹುದು.
ಕನ್ನಡ ಪರ ಸಂಘಟನೆ ಬಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.  ಇದರಿಂದ ಚಿತ್ರಕ್ಕೆ ಬಾರಿ ಹೊಡೆತ ಬಿದ್ದಂತಾಗಿದೆ. //// Karnataka News