ತಮ್ಮ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ-ಎಚ್.ಡಿ.ಕುಮಾರಸ್ವಾಮಿ

JDS Wins More Seats Kumarswamy | Kannada Politics News

Mysore ( itskannada ) ಮೈಸೂರು : ತಮ್ಮ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷವು ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ , ದಲಿತರ ಮತಗಳಷ್ಟೇ ಅಲ್ಲದೆ ಎಲ್ಲ ವರ್ಗದವರೂ ತಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ. ಕರ್ನಾಟಕದ ಜನತೆ ಬುದ್ಧಿವಂತರಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಿಜ ಬಣ್ಣದ ಅನುಭವ ಅವರಿಗಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ  ಹೇಳಿದ್ದಾರೆ.

ತಮ್ಮ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ-ಎಚ್.ಡಿ.ಕುಮಾರಸ್ವಾಮಿ- Politics

ಈ ಬಾರಿ ಚುನಾವಣೆಯಲ್ಲಿ ಅವರಿಗೆ ಒಳ್ಳೆಯ ಪಾಠ ಕಲಿಸಲಿದ್ದಾರೆ ,ಇಂತಹ ಪಕ್ಷಗಳ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಬದಲಾವಣೆ ಬಯಸಿರುವ ಜನರು ಜೆಡಿಎಸ್ ಮತ್ತು ಬಿಎಸ್ ಪಿಯತ್ತ ವಾಲಿದ್ದಾರೆ ಮತ್ತು ಅವರ ನಂಬಿಕೆಯನ್ನು ನಿಜ ಮಾಡುವುದು ನಮ್ಮ ಗುರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪಕ್ಷವನ್ನು ತಾವು  ಸ್ವಯಂ ಪ್ರೇರಿತರಾಗಿ ಬಿಟ್ಟಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ತಮ್ಮನ್ನು ಸುಖಾಸುಮ್ಮನೇ ಅಮಾನತು ಮಾಡಿದ್ದರು ಎಂದು ಹೇಳಿರುವ ಸಿಎಂ ಸಿದ್ಧರಾಮಯ್ಯ ಮಾತಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಅವರನ್ನು ಅಮಾನತು ಮಾಡಿದ್ದರು ಎಂದು ಸಮರ್ಥಿಸಿಕೊಂಡರು. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ  -Mysore News Online – Karnataka Politics News