ಸಾಲದ ಹಣವನ್ನು ಹಿಂಪಡೆಯಲು ಬಸ್ಸನ್ನೇ ಅಪಹರಿಸಿದರು

Bus hijacked to recover loan money | Karnataka Crime News

Mysore : ( itskannada) ಮೈಸೂರು : ಖಾಸಗಿ ಸಂಸ್ಥೆಯ 42 ಪ್ರಯಾಣಿಕರನ್ನು ಹೊತ್ತು ಸಾಗುತಿದ್ದ ಬಸ್ಸನ್ನು 4 ಆರೋಪಿಗಳು ತಾವು ಸೆಂಟ್ರಲ್ ಬ್ರಾಂಚ್ ಪೊಲೀಸರು ಎಂದು ಹೇಳಿಕೊಂಡು ಅಪಹರಿಸಿರುವ ಘಟನೆ ನಡೆದಿದೆ. ಈ ಕೃತ್ಯ ಬಸ್ ಮೇಲಿನ ಸಾಲದ ಮರುಪಡೆಯುವಿಕೆಗಾಗಿ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. – Crime News

ಸಾಲದ ಹಣವನ್ನು ಹಿಂಪಡೆಯಲು ಬಸ್ಸನ್ನೇ ಅಪಹರಿಸಿದರು-Bus hijacked to recover loan money

ಘಟನೆಯ ಬಳಿಕ ಬಸ್ ನ್ನು ಅಪರಿಸಿದವರು ಯಾರು ಎಂದು ತಿಳಿದಿದೆ, ಖಾಸಾಗಿ ಸಂಸ್ಥೆಯೊಂದಕ್ಕೆ ಬಸ್ ಕೊಳ್ಳಲು ಸಾಲ ನೀಡಿದ್ದ ಸಾಲ ವಸೂಲಿ ತಂಡ ಎಂದು ಪೋಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಸ್ ಕೊಳ್ಳಲು ಸಾಲ ಪಡೆದಿದ್ದ ಸಂಸ್ಥೆಯ ಮಾಲೀಕ ಸರಿಯಾಗಿ ಸಾಲವನ್ನು ಪರುಪಾವತಿಸುತ್ತಿರಲಿಲ್ಲ , ಬಸ್ ಮಾಲಿಕನಿಗೆ ಎಷ್ಟೇ ಬಾರಿ ಎಚ್ಚರಿಸಿದರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಆಗ ಸಾಲ ವಸೂಲಿ ತಂಡವು ಬೇರೆ ದಾರಿ ಕಾಣದೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕಳೆದ ರಾತ್ರಿ ಕಣ್ಣೂರು ಕಡೆಯಿಂದ ಕೇರಳ ಕಡೆ ಸಾಗುತ್ತಿದ್ದ ಬಸ್ ಗೆ ಮೋಟರ್ ಬೈಕ್ ನಲ್ಲಿ ಮೈಸೂರು ರಸ್ತೆ ರಾಜರಾಜೇಶ್ವರಿ ನಗರದ ಸಮೀಪ ಅಡ್ಡಗಟ್ಟಿದ  4 ಜನರ ತಂಡ ನಾವು ಬೆಂಗಳೂರು ಸಿ.ಸಿ.ಬಿ. ಎಂದು ಪ್ರಯಾಣಿಕರನ್ನು ಮಾರ್ಗ ಮದ್ಯೆಯೇ ಬಿಟ್ಟು ಪಟ್ಟಣಗೆರೆಯ ತಮ್ಮ ಗೋಡೋನ್ ಗೆ ಸಾಗಿಸುತ್ತಾರೆ.

 

ಈ ವೇಳೆ ಅದೇ ಬಸ್ ನ ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸುತ್ತಾರೆ , ಶೀಘ್ರದಲ್ಲೇ ಬಸ್ ಅನ್ನು ಸಾಗಿಸಿದ್ದ ಗೋಡೋನ್ ಸುತ್ತ 30 ಕ್ಕೂ ಹೆಚ್ಚು ಪೋಲಿಸರು ಧಾವಿಸಿ ಗೋಡೋನ್ ಗೆ ಸುತ್ತುವರೆದು , ಸ್ಥಳದಲ್ಲಿದ್ದ ಒಬ್ಬನನ್ನು ವಶಕ್ಕೆ ಪಡೆದು ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ನಡೆದಿದೆ. ಒಟ್ಟಾರೆ ಅಪರಾಧದಲ್ಲಿ ನಾಲ್ಕು ಜನ ತೊಡಗಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Crime News – Kannada News – Mysore News Online

WebTitle : ಸಾಲದ ಹಣವನ್ನು ಹಿಂಪಡೆಯಲು ಬಸ್ಸನ್ನೇ ಅಪಹರಿಸಿದರು-Bus hijacked to recover loan money

Keyword: ಸಾಲದ ಹಣವನ್ನು ಹಿಂಪಡೆಯಲು ಬಸ್ಸನ್ನೇ ಅಪಹರಿಸಿದರು-Bus hijacked to recover loan money

Crime News , Kannada Crime News , Karnataka Crime News