ಭಾರೀ ಮಳೆ : ಮಲೆನಾಡಿಗೆ ಎಚ್ಚರಿಕೆ

Kannada News (itskannada) ಭಾರೀ ಮಳೆ : ಮಲೆನಾಡಿಗೆ ಎಚ್ಚರಿಕೆ – ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಿಗೆ ಜೂ.10-11ರಂದು ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮತ್ತೆ ಚುರುಕಾಗುವ ಲಕ್ಷಣವಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳದಲ್ಲಿ ವರ್ಷಧಾರೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.
ಇನ್ನು ಹಾಸನದಲ್ಲಿ ಸಾಧಾರಣ ಮಳೆಯಾಗಿದ್ದು, ಸಕಲೇಶಪುರ ತಾಲೂಕಿನ ಕಳಲೆ ಗ್ರಾಮದಲ್ಲಿ ಭಾರಿ ಗಾಳಿಗೆ ಮರ ಬಿದ್ದು ಶನಿವಾರ ಕೂಲಿ ಕಾರ್ವಿುಕ ಪುಟ್ಟಯ್ಯ (60)ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಶ್ರವಣಬೆಳಗೊಳ ಮತ್ತು ಹಿರೀಸಾವೆ ಸುತ್ತಮುತ್ತ ಆಗಾಗ ಸೋನೆ ಮಳೆಯಾಗುತ್ತಿದ್ದು ರೈತರಿಗೆ ಕೆಲಸ ಮಾಡಲು ಹಾಗೂ ದನ-ಕರುಗಳು ಮೇಯಲು ತೊಂದರೆಯಾಗಿದ್ದು ರೈತರಿಗೆ ಸ್ವಲ್ಪ ಮಟ್ಟಿಗೆ ಬೇಸರ ಮೂಡಿಸಿದೆ. ////