ರೈಲು ಅಪಘಾತ-11 ಶಾಲಾ ಮಕ್ಕಳ ದುರ್ಮರಣ

11 Children Killed As Train Hits School Bus In Uttar Pradesh

22

Kannada News ( itskannada ) : ಲಕ್ನೋ( ಉತ್ತರ ಪ್ರದೇಶ): ಗೋರಖ್ಪುರದಿಂದ 50 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಕುಶಿನಗರದಲ್ಲಿ ಮಾನವರಹಿತ ಕ್ರಾಸಿಂಗ್ನಲ್ಲಿ ಇಂದು ಬೆಳಗ್ಗೆ ಒಂದು ಶಾಲಾ ವ್ಯಾನ್ಗೆ ಹಠಾತ್ ರೈಲು ಡಿಕ್ಕಿಯಾದ ಪರಿಣಾಮ ಸುಮಾರು 11 ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಅಪಘಾತಕ್ಕೆ ವಿಚಾರಣೆ ನಡೆಸಲು ಗೋರಖ್ಪುರದ ಉನ್ನತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ , ಮೃತ ಮಕ್ಕಳ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ರೈಲು ಅಪಘಾತ-11 ಶಾಲಾ ಮಕ್ಕಳ ದುರ್ಮರಣ-11 Children Killed As Train Hits School Bus In Uttar Pradesh

ಅಪಘಾತದ ಬಗ್ಗೆ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡ ಮಕ್ಕಳು ಮತ್ತು ಸಿಬ್ಬಂದಿಯನ್ನು ಘಟನೆ ನಡೆದ ಸ್ಥಳದಿಂದ 30 ಕಿ.ಮೀ ದೂರದಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಾಲೆಯ ವ್ಯಾನ್ ಚಾಲಕ ಚಾಲನೆ ಮಾಡುವಾಗ ಇಯರ್ಫೋನ್ ಧರಿಸಿದ್ದನೆಂದು ತಿಳಿದುಬಂದಿದೆ. ಇದು ಶುದ್ಧ ನಿರ್ಲಕ್ಷ್ಯದ ಸಂಗತಿಯಾಗಿದೆ” ಎಂದು ಪರಿಸ್ಥಿತಿಯ ಬಗ್ಗೆ ತಿಳಿದ ಹಾಗೂ ಸ್ಥಳಕ್ಕೆ ಬೇಟಿ ನೀಡಿದ ಮು ಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಘಟನೆಯ ಮೇಲೆ ತನಿಖೆ ನಡೆಸಲಾಗುತ್ತದೆ ಮತ್ತು ಅಪರಾಧಿಗಳು ತೀವ್ರವಾದ ಶಿಕ್ಷೆಯನ್ನು ಎದುರಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅಪಘಾತಕ್ಕೆ ವಿಚಾರಣೆ ನಡೆಸಲು ಗೋರಖ್ಪುರದ ಉನ್ನತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ನಾಮೋ ಅಪ್ಲಿಕೇಶನ್ ಮೂಲಕ , ಪ್ರಧಾನಿ ಮೊದಿರವರು “ಶಾಲೆಯ ವ್ಯಾನ್ ಮತ್ತು ಉತ್ತರ ಪ್ರದೇಶದ ಕುಶಿನಗರದಲ್ಲಿನ ರೈಲು ನಡುವೆ ನಡೆದ 11 ಶಾಲಾ ವಿದ್ಯಾರ್ಥಿಗಳ ಸಾವಿನ ಬಗ್ಗೆ ನಾನು ಬಹಳ ದುಃಖಿತನಾಗಿದ್ದೇನೆ. ಉತ್ತರ ಪ್ರದೇಶ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ” ಎಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದಾಗ ಪ್ರಧಾನಿ ಮೋದಿ ಹೇಳಿದ್ದಾರೆ.

ಹನ್ನೊಂದು ಶಾಲಾ ಮಕ್ಕಳನ್ನು ಬಲಿತೆಗೆದುಕೊಂಡ ಖುಷಿನಗರ ರೈಲ್ವೆ ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ  ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಗಾಯಗೊಂಡಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಹಾಗೂ ನೆರವು ನೀಡುವಂತೆಯೂ ಅವರು ಜಿಲ್ಲಾಡಳಿತಕ್ಕೆ  ಸೂಚನೆ ನೀಡಿದ್ದಾರೆ.

ಹದಿನೆಂಟು ಶಾಲಾ ಮಕ್ಕಳನ್ನು ಕರೆದುಕೊಂಡು ಬಸ್ಸು ಹೊರಟಿದ್ದಾಗ  ಈ ದುರಂತ ಸಂಭವಿಸಿದ್ದು, 11 ಮಕ್ಕಳು ಸಾವಿಗೀಡಾಗಿ ಗಾಯಗೊಂಡಿರುವ   ಏಳು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿ ಆನಂದಕುಮಾರ್ ತಿಳಿಸಿದ್ದಾರೆ. || Karnataka News – Karnataka Crime News
11 Children Killed As Train Hits School Bus In Uttar Pradesh
Open

error: Content is protected !!