ಸಿದ್ದರಾಮಯ್ಯ ಗೆ ಸೋಲಿನ ಭೀತಿ-ಯಡಿಯೂರಪ್ಪ

Politics- Gadag : ( itskannada ) ಗದಗ:  ಸಿದ್ದರಾಮಯ್ಯ ಗೆ ಸೋಲಿನ ಭೀತಿ ಎದುರಾಗಿದೆ , ಅವರಿಗೆ ಸೋಲಿನ ಮುಂದಿನ ದಿನಗಳ ನೆನಪಾಗಿದೆ , ಆದ್ದರಿಂದಲೇ ಅವರು ತಮ್ಮ ಮನಸಿಗೆ ಬಂದಂತೆ ಮಾತನಾಡುತ್ತಾರೆ, ಎಂದು ಗದಗನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ  ಬಿ‌.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ ಸೋಲಿನ ಭೀತಿಯಿಂದ  ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಗೆ ಸೋಲಿನ ಭೀತಿ-ಯಡಿಯೂರಪ್ಪ

ಜೈಲಿನಿಂದ ಬಂದವರನ್ನು ಪಕ್ಷದಲ್ಲಿ ಇತ್ತುಕೊಂಡಿರುವ ಪಕ್ಷ , ಭ್ರಷ್ಟ ಪಕ್ಷ ಎಂದ ಸಿಎಂ ಹೇಳಿಕೆಗೆ ಬಿಎಸ್‌ವೈ ತಿರುಗೇಟು ನೀಡಿದ್ದು ನಮ್ಮ ಬಗ್ಗೆ ಮಾತನಾಡುವ ಅವರ ಸುತ್ತ ಇರುವವರು ಯಾರು? ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಸುಳ್ಳು ಸರ್ಕಾರ ಕಾಂಗ್ರೆಸ್ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾದಾಮಿಯಲ್ಲಿ ನಮ್ಮ ಅಬ್ಯರ್ಥಿ ಶ್ರೀರಾಮುಲು ಗೆಲುವು ನೂರಕ್ಕೆ ನೂರು ನಿಶ್ಚಿತ. ಆ ಭಯದಿಂದ ಸಿ.ಎಂ ಬದಾಮಿಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.
ಲಕ್ಷಾಂತರ ಜನರ ಮದ್ಯೆ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಇದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ Karnataka Politics News – Kannada News – Gadag News Online