ಮತದಾರರಿಗೆ ಹಂಚಲು ತಂದಿದ್ದ ₹ 13.35 ಲಕ್ಷ ಹಣ ಜಪ್ತಿ

Kannada News : (itskannada) ಹಾನಗಲ್: ಮತದಾರರಿಗೆ ಹಂಚಲು ತಂದಿದ್ದ ₹ 13.35 ಲಕ್ಷ ಹಣ ಜಪ್ತಿ. ಹಾನಗಲ್ ಪಟ್ಟಣ ಹೊರವಲಯದ ಮುಂಡುಗೋಡ ರಸ್ತೆಯಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಬಳಿ ಮಂಗಳವಾರ ರಾತ್ರಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು, ಅಭ್ಯರ್ಥಿಯ ಪರವಾಗಿ ಕಾರ್ಯಕರ್ತರಿಗೆ ಹಂಚಲು ತಂದಿದ್ದ ₹ 13.35 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

ಮತದಾರರಿಗೆ ಹಂಚಲು ತಂದಿದ್ದ ₹ 13.35 ಲಕ್ಷ ಹಣ ಜಪ್ತಿ – Politics

ಕಾರೊಂದರಲ್ಲಿ ಪತ್ತೆಯಾದ ಹಣ, ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ತರಲಾಗಿತ್ತು ಎಂದು ತಿಳಿದು ಬಂದಿದೆ.

ದಾಳಿ ನಡೆಯುತ್ತಿದ್ದಂತೆ ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಬಗ್ಗೆ ಹಣವಿದ್ದ ಕಾರು ಮತ್ತು ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಪ್ತಿ ಮಾಡಿದ ಹಣದ ಎಣಿಕೆ ನಡೆಯುತ್ತಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.

ಚುನಾವಣಾಧಿಕಾರಿ ಸದಾಶಿವಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್ ರೇವಣ್ಣ ಕಟ್ಟೀಮನಿ, ತಹಶೀಲ್ದಾರ್ ಶಕುಂತಳಾ ಚೌಗಲ ನೇತೃತ್ವದ ತಂಡವು ದಾಳಿ ಮಾಡಿದೆ. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ Karnataka News

ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ ರೈಸರ್ಸ್​ ಗೆಲುವು

STAR KANNADA : ನಿರೀಕ್ಷಿಸಿ – ನೂತನ ಅಂತರ್ಜಾಲ ಸುದ್ದಿವಾಹಿನಿ STAR KANNADA – KANNADA NEWS PORTAL Star Kannada ದ ಸಾಮಾಜಿಕ ಜಾಲತಾಣಗಳು – FaceBook – Twitter – Google + – Youtube – Pinterest – InstagramStar Kannada