ಮಂಡ್ಯ ಬಚಾವ್ ಆಂದೋಲನ – itskannada

0

ಬೆಂಗಳೂರು:  ( itskannada ) ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮಂಡ್ಯ ಕ್ಷೇತ್ರಕ್ಕೆ ರೆಬಲ್ ಸ್ಟಾರ್ ಅಂಬರೀಷ್ ಗೆ ಟಿಕೆಟ್ ಕೊಡುವುದಾಗಿ ಸುದ್ದಿ ಬಂದಾಗಲೇ ಅಸಮಾಧಾನವೂ ಎದ್ದಿತ್ತು. ಅದೀಗ ಹೆಮ್ಮರವಾಗಿದೆ. ಅಂಬರೀಷ್ ವಿರುದ್ಧ ರವಿಕುಮಾರ್ ಗಣಿಗ ಬೆಂಬಲಿಗರು ತೊಡೆ ತಟ್ಟಿದ್ದು, ಬಿ ಫಾರಂ ಸ್ವೀಕರಿಸದಂತೆ ಎಚ್ಚರಿಕೆ ನೀಡಿದ್ದಾರೆ. ರವಿಕುಮಾರ್ ಗಣಿಗ ಕಾಂಗ್ರೆಸ್ ನ ಮಂಡ್ಯ ಟಿಕೆಟ್ ಆಕಾಂಕ್ಷಿಯಾಗಿದ್ದರು.ರವಿಕುಮಾರ್ ಆಪ್ತ ಕೆಬ್ಬಳ್ಳಿ ಆನಂದ್ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ನೀವು ಸಮೃದ್ಧರಾಗಿದ್ದೀರಿ. ಈಗ ಬೇರೆಯವರಿಗೆ ಅವಕಾಶ ಕೊಡಿ. ಒಂದು ವೇಳೆ ಪಕ್ಷ ಕೊಡುವ ಬಿ ಫಾರಂ ರವಿಕುಮಾರ್ ಗಣಿಗ ಅವರಿಗೆ ಹಸ್ತಾಂತರಿಸದಿದ್ದರೆ ಅಂಬಿ ಹಠಾವೋ ಮಂಡ್ಯ ಬಚಾವೋ ಆಂದೋಲನ ನಡೆಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ. ಇತ್ತ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ರವಿಕುಮಾರ್ ಗಣಿಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. |Mandya News


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಮಂಡ್ಯ ಸುದ್ದಿಗಳಿಗಾಗಿ ವಿಭಾಗ –Mandya News Online– ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ – Mandya News Kannada – ಕ್ಲಿಕ್ಕಿಸಿ. for more News in Mandya City/District click –Mandya News Online– or – Mandya News Kannada–   itskannada : News-Entertainment-Information : for latest Today news or more in Karnataka Kannada News click Kannada News or look at Karnataka News .

You're currently offline