ಮಂಡ್ಯ-ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ್ದು-ಟಿಕೆಟ್ ರವಿಕುಮಾರ್ ಗೌಡ ಗಾಣಿಗರವರಿಗೆ

0

Mandya : (itskannada) ಮಂಡ್ಯ: ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಚಿವ ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ ಕಾರಣ ಅಂಬರೀಶ್​ ಅವರ ಬದಲಾಗಿ ಕಾಂಗ್ರೆಸ್​ ಕೊನೆಗೂ ಮಂಡ್ಯ ಟಿಕೆಟ್​ ಅನ್ನು ಪ್ರಬಲ ಆಕಾಂಕ್ಷಿಯಾಗಿದ್ದ ರವಿಕುಮಾರ್ ಗೌಡ ಗಾಣಿಗ ಅವರಿಗೆ ನೀಡಿದೆ.

ಮಂಡ್ಯ-ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ್ದು-ಟಿಕೆಟ್ ರವಿಕುಮಾರ್ ಗೌಡ ಗಾಣಿಗರವರಿಗೆ – Politcs

ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ ಕಾರಣ ಕೊನೆ ಕ್ಷಣದಲ್ಲಿ ರವಿ ಗಾಣಿಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಂಬರೀಶ್ ತಾವು ನಿಲ್ಲದಿದ್ದರೆ ನನಗೆ ಟಿಕೆಟ್​ ಕೊಡಿಸುತ್ತಾರೆ ಎಂದು ನಂಬಿಕೊಂಡಿದ್ದ ಅವರ ಆಪ್ತ ಅಮರಾವತಿ ಚಂದ್ರಶೇಖರ್​ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಬರೀಶ್‌ ಸ್ಪರ್ಧೆ ಮಾಡದಿದ್ದರೆ ತಮಗೇ ಟಿಕೆಟ್‌ ಕೊಡಿ ಎಂದು ಅಮರಾವತಿ ಚಂದ್ರಶೇಖರ್‌ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿ, ಅಂಬರೀಶ್‌ ತಮಗೆ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡಿರುವ ಅಂಬರೀಶ್‌ ತಾವು ಯಾರಿಗೂ ಟಿಕೆಟ್‌ ಕೊಡಿಸುವ ಭರವಸೆ ನೀಡಿಲ್ಲ ಎಂದು ಖಾರವಾಗಿ ಹೇಳಿದ್ದಾರೆ. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ . . Karnataka Politics News – Mandya News Online

ಮತದಾರರಿಗೆ ಹಂಚಲು ತಂದಿದ್ದ ₹ 13.35 ಲಕ್ಷ ಹಣ ಜಪ್ತಿ

STAR KANNADA : ನಿರೀಕ್ಷಿಸಿ – ನೂತನ ಅಂತರ್ಜಾಲ ಸುದ್ದಿವಾಹಿನಿ STAR KANNADA – KANNADA NEWS PORTAL Star Kannada ದ ಸಾಮಾಜಿಕ ಜಾಲತಾಣಗಳು – FaceBook – Twitter – Google + – Youtube – Pinterest – InstagramStar Kannada

You're currently offline