ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ

29

Crime News : ( itskannada)ಬೆಂಗಳೂರು: ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಆಕ್ರೋಶಗೊಂಡ ಪ್ರಿಯಕರ ಪ್ರಿಯತಮೆಯನ್ನು ಕೊಲೆ ಮಾಡಿದ ಘಟನೆ ಜೆ.ಸಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಬ್ಬರೂ ಮೊದಲಿನಿಂದಲೂ ಪ್ರೀತಿಸಿದ್ದರಾದರೂ, ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದೆ. ಮದುವೆಯಾದ 1 ವಾರದಲ್ಲೇ ಪತಿಯನ್ನು ತೊರೆದು ಬಂದಿದ್ದ ಯುವತಿ ಜೆ.ಸಿ. ನಗರದಲ್ಲಿ ಯುವಕನೊಂದಿಗೆ ವಾಸವಾಗಿದ್ದರು.

ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಪ್ರಿಯಕರ ಚಾಕುವಿನಿಂದ ಇರಿದಿದ್ದಾನೆ. ಯುವತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Crime News – Kannada News

Open

error: Content is protected !!