ಪ್ರವಾಸಕ್ಕೆ ಬಂದು ಸಮುದ್ರ ಪಾಲಾದ ಯುವಕ

Udupi-Crime News : ( itskannada )  ಪ್ರವಾಸಕ್ಕೆಂದು ಆಗಮಿಸಿದ್ದ ತಂಡವೊಂದು ನೀರಿನಲ್ಲಿ ಆಡುತ್ತಿದ್ದಾಗ ಯುವಕನೋರ್ವ ನೀರು ಪಾಲಾದ ಘಟನೆ ಕಾಪು ಬೀಚ್ ನಲ್ಲಿ ಶನಿವಾರದಂದು ಸಂಜೆ ನಡೆದಿದೆ. ನೀರು ಪಾಲಾದ ಯುವಕನನ್ನು ಕಿಶೋರ್ (17) ಎಂದು ಗುರುತಿಸಲಾಗಿದೆ. ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರ ತಂಡ ಕಾಪು ಬೀ‍ಚ್ ನಲ್ಲಿ ಸಮುದ್ರಕ್ಕಿಳಿದು ನೀರಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಿಶೋರ್ ಹಾಗೂ ಭರತ್ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಕಿಶೋರ್ ನೀರು ಪಾಲಾಗಿದ್ದು, ಭರತ್ ನನ್ನು ರಕ್ಷಿಸಲಾಗಿದೆ‌. ಕಿಶೋರ್ ದೇಹಕ್ಕೆ ಹುಡುಕಾಟ ನಡೆಯುತ್ತಿದ್ದು ಕಾಪು ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –   Udupi News Online – Kannada News – Karnataka Crime News