ಪ್ರಕಾಶ್ ರೈ ಹಾಗೂ ಚಕ್ರವರ್ತಿ ಸೂಲೀಬೆಲೆ ಟ್ವೀಟ್ ವಾರ್

19

Politics : (itskannada) : ಯುವ ಬ್ರಿಗೇಡ್ ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹಾಗೂ ಪ್ರಕಾಶ್ ರೈ ನಡುವೆ ಟ್ವೀಟ್ ವಾರ್ ನಡೆದಿದೆ.

ಪ್ರಕಾಶ್ ರೈ ಮಾಡಿದ್ದ ಟ್ವೀಟ್…ಪ್ರಕಾಶ್ ರೈ ಹಾಗೂ ಚಕ್ರವರ್ತಿ ಸೂಲೀಬೆಲೆ ಟ್ವೀಟ್ ವಾರ್-itskannada 2

ಮಂಗಳೂರು ದಕ್ಷಿಣ ವಿಭಾಗ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ‘ವೇದವ್ಯಾಸ್ ಕಾಮತ್’ ರವರ ಧರ್ಮಪತ್ನಿ ತಮ್ಮ ಪತಿಯ ಪರ ಮತಪ್ರಚಾರ ಮಾಡುತ್ತಾ ಹಿಂದುತ್ವ ಉಳಿಯಬೇಕಾದರೆ ಬಿಜೆಪಿ ಬರಲೇಬೇಕು ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡೋಣ ಎಂಬ ಹೇಳಿಕೆ ಇರುವ ವೀಡಿಯೋ ವೈರಲ್ ಆಗಿತ್ತು. ಆ ವೀಡಿಯೋವನ್ನು ನಟ ಪ್ರಕಾಶ್ ರಾಜ್ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ “ನೋಡಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಧರ್ಮಪತ್ನಿಯು ಧರ್ಮದ ಆದಾರದ ಮೇಲೆ ಜನರಿಗೆ ಓಟುಗಳನ್ನು ಕೇಳುತಿದ್ದಾರೆ ಇವರ ಈ ಕೋಮುವಾದಕ್ಕೆ ನಾಚಿಕೆಯಾಗಬೇಕು, ಇದೇನಾ ನಿಮ್ಮ ಸಬ್ಕಾ ಸಾಥ್ ಸಬ್ಕಾ ವಿಕಾಸ್” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

ಚಕ್ರವರ್ತಿ ಸೂಲೀಬೆಲೆ ಮಾಡಿದ ಟ್ವೀಟ್…

ಪ್ರಕಾಶ್ ರಾಜ್ ರವರ ಈ ಟ್ವೀಟ್ಪ್ರಕಾಶ್ ರೈ ಹಾಗೂ ಚಕ್ರವರ್ತಿ ಸೂಲೀಬೆಲೆ ಟ್ವೀಟ್ ವಾರ್-itskannada 1 ಗೆ ಚಕ್ರವರ್ತಿ ಸೂಲೀಬೆಲೆಯವರು ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದರು. “ಪ್ರಕಾಶ್ ರಾಜ್ ರವರೇ, ಅವರು ಹೇಳಿರುವುದರಲ್ಲಿ ತಪ್ಪೇನಿದೆ.? ಸಿದ್ದರಾಮಯ್ಯನವರ 5 ವರ್ಷಗಳಲ್ಲಿ ಹಿಂದೂಗಳನ್ನು ಮುಗಿಸಲು ಎಲ್ಲಾ ವಿಧದ ದಾರಿಗಳನ್ನು ಅನುಸರಿಸಿದರು. ಹಿಂದೂ ಕಾರ್ಯಕರ್ತರನ್ನು ಕೊಂದ ಪಿ.ಎಪ್.ಐ ಸಂಘಟನೆಗೆ ಬೆಂಬಲಿಸಿದರು, ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರನ್ನು ಪ್ರೇರೇಪಿಸಿದರು, ಹಾಗಾಗಿ ಧರ್ಮ ಉಳಿಯಬೇಕೆಂದರೆ ಈ ಮುಖ್ಯಮಂತ್ರಿ ನಿರ್ಗಮಿಸಲೇಬೇಕು.” ಎಂದು ಟ್ವೀಟ್ ಮಾಡುವ ಮೂಲಕ ಪ್ರಕಾಶ್ ರೈ ರವರ ಟ್ವೀಟ್ ಗೆ ಉತ್ತರ ನೀಡಿದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ. – Karnataka Politics News – Kannada News

 

Open

error: Content is protected !!