ಪ್ರಕಾಶ್ ರೈ ಗೆ ಪ್ರಚಾರದ ಹುಚ್ಚು-ಹುಚ್ಚ ವೆಂಕಟ್

35

Politics : (itskannada) ರಾಜಕೀಯದ ಕೆಸರೆರಚಾಟ ಇನ್ನೂ ಬಿರುಸಾಗಿದೆ , ಚುನಾವಣೆ ಸಮಿಪಿಸಿದಷ್ಟು ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ, ಈ ಹಿಂದೆ ಚಕ್ರವರ್ತಿ ಸುಲಿಬೇಲಿ ರವರ ಜೊತೆ Twitter ಮಾತುಕತೆಯ ಬಳಿಕ , ( ಓದಲು ಇಲ್ಲಿ ಕ್ಲಿಕ್ಕಿಸಿ – ) ಇದೀಗ ಹುಚ್ಚ ವೆಂಕಟ್ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಗೆ ಚಳಿ ಬಿಡಿಸಿದ್ದಾರೆ.

ಪ್ರಕಾಶ್ ರೈ ಗೆ ಪ್ರಚಾರದ ಹುಚ್ಚು-ಹುಚ್ಚ ವೆಂಕಟ್

ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಕುರಿತಾಗಿ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಚಿತ್ರನಟ ಹುಚ್ಚ ವೆಂಕಟ್, ಪ್ರಕಾಶ್ ರೈಗೆ ಸದ್ಯ ಯಾವುದೇ ಸಿನಿಮಾಗಳಲ್ಲೂ ನಟನೆಗೆ ಅವಕಾಶ ಸಿಗುತ್ತಿಲ್ಲ, ಅವನಿಗೆ ಮಾಡಲು ಬೇರೇನೂ ಕೆಲಸ ಇಲ್ಲ. ಅದಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಿರುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಪ್ರಚಾರದ ಹುಚ್ಚಿನಿಂದ ಪ್ರಕಾಶ್ ರೈ ಗೆ ತಲೆ ತಿರುಗುತ್ತಿದೆ, ಪ್ರಚಾರ ಸಿಕ್ಕರೆ ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ಅವಕಾಶ ಸಿಗಬಹುದು ಎಂಬ ಉದ್ದೇಶದಿಂದ ಪ್ರಕಾಶ್ ರೈ ಈ ರೀತಿ ಮಾತನಾಡುತ್ತಿದ್ದಾನೆ. ಸಿನಿಮಾಗಳಿಗೆ ಡೈಲಾಗ್ ಹೊಡೆಯುವುದು ಸುಲಭ, ಅಲ್ಲಿ ಬೇರೆ ಯಾರೋ ಡೈಲಾಗ್ ಬರೆದುಕೊಟ್ಟಿರುತ್ತಾರೆ. ಆದರೆ ದೇಶವನ್ನು ಆಡಳಿತ ನಡೆಸುವ ಕಷ್ಟವೇನೆಮದು ಪ್ರಧಾನಿಗೆ ಮಾತ್ರ ಗೊತ್ತು. ಸದ್ಯ ಮಾಡಲು ಸಿನಿಮಾ ಇಲ್ಲದ ಕಾರಣ ಮೋದಿ ವಿರುದ್ಧ ಮಾತನಾಡುತ್ತಾನೆ. ಸಿನಿಮಾದಲ್ಲಿ ವಿಲನ್ ಆಗಿದ್ದೀಯಾ, ಲೈಫಲ್ಲಿ ಅದು ಬೇಡ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ. ಸಿನಿಮಾನೇ ಬೇರೆ ನಿಜಜಿವನವೇ ಬೇರೆ ಎಂದು ಹೆಚ್ಚರಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News – ಅಥವಾ Crime News – Karnataka Crime News

Open

error: Content is protected !!