ಪ್ರಕಾಶ್ ರಾಜ್ ನಾಲಿಗೆ ಹರಾಜಾಗಿದೆ-ಅನಂತ್ ಕುಮಾರ್ ಹೆಗಡೆ

Politics : (itskannada) ಪ್ರಕಾಶ್ ರಾಜ್ ವಿರುದ್ಧ ಗುಡುಗುತ್ತಾ ಅನಂತಕುಮಾರ್ ಹೆಗಡೆಯವರು ಪ್ರಕಾಶ್ ರಾಜ್ ನ ನಾಲಿಗೆ ಹಾಗೂ ಅವನ ಬುದ್ಧಿ ಎಷ್ಟು ರುಪಾಯಿಗೆ ಹರಾಜಾಗಿದೆ ಎಂಬುದನ್ನು ತಿಳಿದರೆ ನೀವು ಕಂಗಾಲಾಗುತ್ತಿರಿ, ಇವರನ್ನೆಲ್ಲ ಕೇಂಬ್ರಿಜ್ ಅನಾಲಿಟಿಕಾ ಮೋದಿ ವಿರುದ್ಧ ಮಾತನಾಡಲು ಕಾಂಟ್ರಾಕ್ಟ್ ಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ. ನಮ್ಮಲ್ಲಿರುವ ಎಲ್ಲಾ ಬುದ್ಧಿಜೀವಿಗಳು ಮಾರಾಟವಾಗಿದ್ದಾರೆ ಅವರ ತಲೆಯಲ್ಲಿ ಇರುವುದು ಒಂದೇ ಅದು ಮೋದಿ ವಿರುದ್ಧ ಟೀಕೆ ಮಾಡುವುದು. ಆ ಪ್ರಕಾಶ್ ರಾಜ್ ಅಂತಾನೇ ನಾನು ಹಿಂದುತ್ವದ ವಿರೋಧಿಯಲ್ಲ ಅನಂತ ಕುಮಾರ ಹೆಗಡೆ, ಮೋದಿ , ಅಮಿತ್ ಶಾ ವಿರೋಧಿ ಅಂತ ಪ್ರಕಾಶ್ ರಾಜ್ ಗೆ ಅರ್ಧಂಬರ್ಧ ನಿದ್ದೆಯಲ್ಲಿ ಹುಚ್ಚು ಹಿಡಿದಿದೆ ಅದಕ್ಕಾಗಿ ಅವರು ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಸಂಸದರು ಆಗಿರುವಂತಹ ಅನಂತ್ ಕುಮಾರ್ ಹೆಗಡೆಯವರು ವಾಗ್ದಾಳಿ ನಡೆಸಿದ್ದಾರೆ .

ಪ್ರಕಾಶ್ ರಾಜ್ ನಾಲಿಗೆ ಹರಾಜಾಗಿದೆ-ಅನಂತ್ ಕುಮಾರ್ ಹೆಗಡೆ

ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಾ ಅನಂತಕುಮಾರ್ ಹೆಗಡೆಯವರು ಪ್ರಕಾಶ್ ರಾಜ್ ಅಂತಹ ಎಡಬಿಡಂಗಿ ಗಳ ವಿರುದ್ಧ ಕಿಡಿಕಾರುತ್ತಾ ದೇಶದ ಹಿತಾಸಕ್ತಿಗೆ ಕಂಟಕರಾಗಿರುವ ಇವರ ವಿರುದ್ಧ ವಾಗ್ದಾಳಿ ನಡೆಸುತ್ತಾ ಅನಂತ್ ಕುಮಾರ್ ಹೆಗಡೆಯವರು ಸ್ವಂತ ಕ್ಕೋಸ್ಕರ ಏನನ್ನು ಬಯಸದಿರುವ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರವನ್ನು ಬಿಚ್ಚಿಡುತ್ತಾ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ ದುಷ್ಟ ಕೂಟಗಳು ಸೇರಿ ಕಾಂಟ್ರಾಕ್ಟ್ ಅನ್ನು ಐದು ಲಕ್ಷ ಕೋಟಿಗೆ ಕೊಟ್ಟಿದ್ದಾರೆ ಇವರು ಎಲ್ಲ ಪತ್ರಿಕೆಗಳಲ್ಲಿ ಮೋದಿ ವಿರುದ್ಧ ಬರೆಯಲು ಕೇಂದ್ರ ಸರ್ಕಾರದ ವಿರುದ್ದ ಬರೆಯಲು ಬಿಜೆಪಿ ವಿರುದ್ಧ ಬರೆಯಲು ಕಾಂಟ್ರಾಕ್ಟನ್ನು ಕೊಟ್ಟಿದ್ದಾರೆ. ಗೌರಿ ಸಂತಾನ, ವಿಚಾರವಾದಿಗಳು ಇವರೆಲ್ಲರಿಗೂ ಮೋದಿ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮಾಡಲು ಬಿಟ್ಟಿದ್ದಾರೆ ಇದಕ್ಕೆಲ್ಲಾ ಕಾರಣ ದುಡ್ಡು ಎಂದು ಕಿಡಿಕಾರಿದ್ದಾರೆ.

ಪ್ರಕಾಶ್ ರಾಜ್ ವಿರುದ್ಧ ಗುಡುಗುತ್ತಾ ಅನಂತಕುಮಾರ್ ಹೆಗಡೆಯವರು ಇದೇ ಪ್ರಕಾಶ್ ರಾಜ್ ನ ನಾಲಿಗೆ ಅವನ ಬುದ್ಧಿ ಎಷ್ಟು ರುಪಾಯಿಗೆ ಹರಾಜಾಗಿದ್ದಾರೆ ಎಂಬುದನ್ನು ತಿಳಿದರೆ ನೀವು ಕಂಗಾಲಾಗುತ್ತಿರಿ, ಇವರನ್ನೆಲ್ಲ ಕೇಂಬ್ರಿಜ್ ಅನಾಲಿಟಿಕಾ ಮೋದಿ ವಿರುದ್ಧ ಮಾತನಾಡಲು ಕಾಂಟ್ರಾಕ್ಟ್ ಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ. ನಮ್ಮಲ್ಲಿರುವ ಎಲ್ಲಾ ಬುದ್ಧಿಜೀವಿಗಳು ಮಾರಾಟವಾಗಿದ್ದಾರೆ ಅವರ ತಲೆಯಲ್ಲಿ ಇರುವುದು ಒಂದೇ ಅದು ಮೋದಿ ವಿರುದ್ಧ ಟೀಕೆ ಮಾಡುವುದು. ಆ ಪ್ರಕಾಶ್ ರಾಜ್ ಅಂತಾನೇ ನಾನು ಹಿಂದುತ್ವದ ವಿರೋಧಿಯಲ್ಲ ಅನಂತ ಕುಮಾರ ಹೆಗಡೆ, ಮೋದಿ , ಅಮಿತ್ ಶಾ ವಿರೋಧಿ ಅಂತ ಪ್ರಕಾಶ್ ರಾಜ್ ಗೆ ಅರ್ಧಂಬರ್ಧ ನಿದ್ದೆಯಲ್ಲಿ ಹುಚ್ಚು ಹಿಡಿದಿದೆ ಅದಕ್ಕಾಗಿ ಅವರು ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ .

ಮೋದಿ ಯಾವಾಗ ಕಪ್ಪು ಹಣದ ಬಗ್ಗೆ ಮಾತನಾಡಲು ಆರಂಭಿಸಿದರೋ ಆಗ ಎಲ್ಲರೂ ದೇಶ ಬಿಟ್ಟು ಓಡಲು ಆರಂಭಿಸಿದರು. ನೀರವ್ ಮೋದಿ, ವಿಜಯ್ ಮಲ್ಯ ಎಲ್ಲ ದೇಶ ಬಿಟ್ಟು ಓಡಲು ಆರಂಭಿಸಿದ್ದು ಯಾಕೆಂದರೆ ಇಲ್ಲಿ ಬದುಕಲು ಸಾಧ್ಯವಿಲ್ಲ ಇಲ್ಲಿ ಮೋದಿ ಬದುಕಲು ಬಿಡುವುದಿಲ್ಲ ಎಂದು. ಇನ್ನೂ ತುಂಬಾ ಜನ ಓಡಲು ಬಾಕಿ ಇದ್ದು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಸರದಿ ಮುಂದೆ ಇರಲಿದೆ ಸದ್ಯದಲ್ಲಿ ಅವರ ಓಟ ಆರಂಭವಾಗಲಿದೆ ಎಂದು ಅನಂತ ಕುಮಾರ್ ಹೆಗಡೆ ಕೆಂಡ ಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಅನಂತಕುಮಾರ್ ಹೆಗಡೆಯವರು ದೇವಸ್ಥಾನ ಮಠ ಮಂದಿರಗಳನ್ನು ವಶಕ್ಕೆ ಪಡೆಯುತ್ತೇವೆ ಅವುಗಳ ಮೇಲೆ ಟ್ಯಾಕ್ಸ್ ಹಾಕುತ್ತೇವೆ ಅಲ್ಲಿ ಬಂದಿರ ತಕ್ಕಂತಹ ಹಣ ಡೊನೇಷನ್ ಗಳನ್ನೆಲ್ಲ ವಶ ಪಡಿಸುತ್ತೇವೆ ಎಂದು ಹೇಳ್ತಾರಲ್ಲಾ ಇವರು ಇದೇ ಮಾತನ್ನು ಚರ್ಚ್ ಮಸೀದಿಗಳ ಬಗ್ಗೆಯೂ ಮಾತನಾಡಲು ತಾಕತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಜಕಾತ್ ಹೆಸರಿನಲ್ಲಿ ಅಮಾಯಕರ ಹಣವನ್ನು ಒಟ್ಟು ಮಾಡುತ್ತಾರೆ, ಅದರಿಂದ ಕಾನೂನು ವಿರೋಧಿ ಕೆಲಸಗಳು ನಡೆಯುತ್ತಿದೆ ಇದರ ಬಗ್ಗೆ ಮಾತನಾಡಲು ತಾಕತ್ತು ಈ ಸರಕಾರಕ್ಕೆ ಇದೆಯೇ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ವಾಗ್ದಾಳಿ ನಡೆಸಿದ್ದಾರೆ .//

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News – Kannada News