ಪಕ್ಷದ ಚಿಹ್ನೆ ಬದಲಾಗಿದ್ದಕ್ಕೆ ಮನನೊಂದು ಪಕ್ಷದ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

Crime News : ( itskannada ) ಹಾವೇರಿ: ಪಕ್ಷದ ಚಿಹ್ನೆ ಬದಲಾಗಿದ್ದಕ್ಕೆ ಮನನೊಂದು ಕೆಜೆಪಿ ಪಕ್ಷದ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿರೇಕೆರೂರಲ್ಲಿ ಸೋಮವಾರ ನಡೆದಿದೆ.

ಹಿರೇಕೆರೂರು ಕೆಜೆಪಿ ಅಭ್ಯರ್ಥಿ ಹರೀಶ ಇಂಗಳಗೊಂದಿ ಆತ್ಮಹತ್ಯೆಗೆ ಯತ್ನಿಸಿದ ಅಭ್ಯರ್ಥಿ. ಪಕ್ಷದ ಚಿಹ್ನೆ ತೆಂಗಿನಕಾಯಿ ಗಾಗಿ ಬೇಡಿಕೆ ಇಟ್ಟಿದ್ದು, ಚುನಾವಣಾಧಿಕಾರಿ ತೆಂಗಿನಮರ ನೀಡಿದ್ದರು. ಇದರಿಂದ ಮನನೊಂದ ಹರೀಶ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಾವೇರಿ ನಗರ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. // Karnataka Politics News – Kannada News – Karnataka Crime News