ನಡುರಸ್ತೆಯಲ್ಲೇ ಬಾಲಕಿಯನ್ನು ನಗ್ನ ಗೊಳಿಸಲು ಯತ್ನ

14

Crime : (itskannada) ಪಾಟ್ನಾ,ಎ.30: ಜೆಹಾನಾಬಾದ್ ಜಿಲ್ಲೆಯಲ್ಲಿ ಯುವಕರ ಗುಂಪೊಂದು 14ರ ಹರೆಯದ ಬಾಲಕಿಯ ಬಟ್ಟೆಗಳನ್ನು ಕಳಚಿ ಬೆತ್ತಲೆಗೊಳಿಸಲು ಯತ್ನಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಎಂಟು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವೈರಲ್ ವೀಡಿಯೊ ತನ್ನ ಗಮನಕ್ಕೆ ಬಂದ ತಕ್ಷಣ ರವಿವಾರ ಬೆಳಿಗ್ಗೆ ಎಫ್‌ಐಆರ್‌ನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದೇನೆ ಮತ್ತು ಆರೋಪಿಗಳ ಬಂಧನಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜೆಹಾನಾಬಾದ್ ಎಸ್‌ಪಿ ಮನೀಷ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಸುಮಾರು ಏಳು ಯುವಕರ ಗುಂಪು ಬಾಲಕಿಯ ಬಟ್ಟೆಗಳನ್ನು ಹರಿದೆಸೆಯಲು ಪ್ರಯತ್ನಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಅವರಲ್ಲಿ ಕೆಲವರು ಬೈಕೊಂದರಲ್ಲಿದ್ದು,ಬೈಕ್ ಮಾಲಿಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಲಕಿ ಚೀರಾಡುತ್ತ ಎರಡೂ ಕೈಗಳನ್ನು ಜೋಡಿಸಿ ತನ್ನ ಮಾನವನ್ನು ಉಳಿಸುವಂತೆ ದುಷ್ಕರ್ಮಿಗಳನ್ನು ಬೇಡಿಕೊಳ್ಳುತ್ತಿದ್ದರೆ, ಅವರು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಅವಮಾನಿಸುತ್ತಿದ್ದರು.

ಜೆಹಾನಾಬಾದ್ ಜಿಲ್ಲೆಯ ಭರ್ಥುವಾ ಗ್ರಾಮದ ಸಮೀಪ ಶನಿವಾರ ಈ ಹೇಯ ಘಟನೆ ನಡೆದಿದೆ ಎನ್ನಲಾಗಿದೆ.

ಶನಿವಾರ ಈ ವೀಡಿಯೊ ವೈರಲ್ ಆಗಿದ್ದು,ತಡರಾತ್ರಿ ಸಾಮಾಜಿಕ ಮಾಧ್ಯಮಗಳ ದೈನಂದಿನ ಪರಿಶೀಲನೆ ಸಂದರ್ಭ ತಮ್ಮ ಗಮನಕ್ಕೆ ಬಂದಿತ್ತು. ರವಿವಾರ ಬೆಳಿಗ್ಗೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗಿದ್ದು,ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Kannada News – Karnataka Crime News

Open

error: Content is protected !!