ದೇಶಕ್ಕೆ ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ-ಪ್ರಕಾಶ ರೈ

20

Koppal (itskannada)ಕೊಪ್ಪಳ : ಗಂಗಾವತಿ ನಗರದ ಎಸ್‍ಎಸ್‍ಎಲ್‍ಆರ್ ಹೋಟೆಲ್‍ನಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಬಹುಭಾಷಾ ನಟ ಪ್ರಕಾಶ ರೈ ಬಿಜೆಪಿ ಪಕ್ಷ ದೇಶಕ್ಕೆ ಅಪಾಯಕಾರಿಯಾಗಿದೆ , ತನ್ನ ನಿಲುವನ್ನ , ತಮ್ಮ ಚಿಂತನೆಗಳನ್ನ ಹಾಗೂ ಒಂದು ಧರ್ಮದ ಚಿಂತನೆಯನ್ನು ಎಲ್ಲರ ಮೇಲೆ ಹೇರುತ್ತಿರುವದು ಮುಂದಿನ ದಿನಗಳಲ್ಲಿ ದೇಶಕ್ಕೆ  ಗಂಡಾಂತರ ದಿನಗಳಾಗಿವೆ ಎಂದಿದ್ದಾರೆ.

ದೇಶಕ್ಕೆ ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ-ಪ್ರಕಾಶ ರೈ

ಬಹುಭಾಷಾ ನಟ ಹಾಗೂ ಸಂವಿಧಾನ ಉಳಿಸಿ ಹೋರಾಟದ  ಕರ್ನಾಟಕದ  ಮುಖ್ಯಸ್ಥ ಪ್ರಕಾಶ ರೈ , ದೇಶಕ್ಕೆ ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇನೆ. 50 ದಿನಗಳಲ್ಲಿ ಬಡವರ ಬ್ಯಾಂಕ್ ಖಾತೆಗೆ 15 ಲ.ರೂ. ಹಾಕುತ್ತೇನೆ ಎಂದು ಭರವಸೆ ನೀಡಿದ್ದ ಮೋದಿಯವರು ಏಕೆ ಈ ಕೆಲಸ ಮಾಡಿಲ್ಲ. ನೋಟು ಅಮಾನ್ಯೀಕರಣ ಮಾಡುವ ಸಂದರ್ಭದಲ್ಲಿ ಕಪ್ಪು ಹಣ ಬಯಲಿಗೆ ತರುತ್ತೇನೆ ಎಂದು ಹೇಳಿದ್ದರು ಎಲ್ಲಿದೆ ಕಪ್ಪು ಹಣ ಎಂದು ಪ್ರಶ್ನಿಸಿದರು. ಈ ಕಪ್ಪು ಹಣವನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ವೆಚ್ಚ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜಿಎಸ್‍ಟಿ ಅನುಷ್ಠಾನಗೊಳಿಸಿದ ಪರಿಣಾಮ ಸ್ವರಾಜ್ ಕಲ್ಪನೆಗೆ ಧಕ್ಕೆ ಬಂದಿದೆ. ಗ್ರಾಮೀಣ ಜನರ ಬದುಕುಗಳು ಬೀದಿ ಪಾಲಾಗಿವೆ. ಹಳ್ಳಿಗಳು ಸರ್ವ ನಾಶಗೊಂಡಿವೆ ಎಂದು ತಿಳಿಸಿದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News

ಪ್ರಕಾಶ್ ರೈ ಹಾಗೂ ಚಕ್ರವರ್ತಿ ಸೂಲೀಬೆಲೆ ಟ್ವೀಟ್ ವಾರ್

 

Open

error: Content is protected !!