ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿ ಸಾವು

Mangalore : ( itskannada) ಮಂಗಳೂರು : ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಂಗಳೂರಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಮುಂಬಯಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೊಣಾಜೆ ಸಮೀಪದ ಕೋಡಿಜಾಲು ನಿವಾಸಿ ಮುಹಮ್ಮದ್ ಹನೀಫ್ ಕೋಡಿಜಾಲ್(42) ಎಂದು ಗುರುತಿಸಲಾಗಿದೆ. ಹನೀಫ್ ಕಳೆದ ಹಲವು ವರ್ಷಗಳಿಂದ ಮುಂಬೈಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಇತ್ತೀಚೆಗೆ ತನ್ನ ಕುಟುಂಬಸ್ಥರನ್ನು ಮುಂಬೈಗೆ ಕರೆಸಿಕೊಂಡಿದ್ದರು. ತನ್ನ ಕುಟುಂಬಸ್ಶರ ಜೊತೆ ಸುತ್ತಾಡಿದ ನಂತರ ತನ್ನ ರೂಂನಲ್ಲಿ ಬಿಟ್ಟು ಇನ್ನೊಂದು ಕಡೆಗೆ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಬಾಗಿಲ ಬಳಿ ನಿಂತಿದ್ದ ಇವರು ಎಂಬಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Kannada News –  Mangalore News Online