ಕಾಂಗ್ರೆಸ್-ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿಯನ್ನಾಗಿಸಿದೆ-ಪ್ರಧಾನಿ ಮೋದಿ

Politics ( itskannada) ಬೆಂಗಳೂರು:  ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಜೆಡಿಸ್ ಗೆ ನಿಲುವಿಲ್ಲ. ರಾಜಕೀಯ ಭವಿಷ್ಯವನ್ನು ಜೆಡಿಎಸ್ ನಿರ್ಧರಿಸಲು ಎಂದಿಗೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಜೆಡಿಎಸ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. 

ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ ಎಲ್ಲಿ ಸೋಲುತ್ತದೆ ಎನ್ನುವ ಬೀತಿಯಿಂದ ಈ ರೀತಿ ಅಪಪ್ರಚಾರ ಮಾಡಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್-ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿಯನ್ನಾಗಿಸಿದೆ-ಪ್ರಧಾನಿ ಮೋದಿ

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಮೇಲೆ ನಿಮಗೆ ಕಿಂಚಿತ್ತಾದರು ನಂಬಿಕೆ ಇದೆಯಾ, ಇಲ್ಲವಾದರೆ ಅವರ ಅವಶ್ಯಕತೆ ನಮಗೇಕೆ ಎಂದು ಪ್ರಶ್ನಿಸಿದ ಅವರು,  ಕಾಂಗ್ರೆಸ್ ನವರು ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿಯನ್ನಾಗಿಸಿದ್ದಾರೆ. ರಾಜ್ಯ ರಾಜಧಾನಿ ಗೊಂದಲದ ಗೂಡಾಗಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿ, ಟ್ರಾಫಿಕ್ ನಿಂದಾಗಿ ಹಲವರು ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಸರ್ಕಾರ ಅದನ್ನು ಜನತೆ ಬದಲಿಸಬೇಕಿದೆ ಎಂದರು.

ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವುದು ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲ ಅದು steal ಬ್ರೀಡ್ಜ್ ಯೋಜನೆಯಾಗಿದೆ. ಅದರ ಮೂಲಕ ಹಣದ ಹೊಳೆ ಹರಿಸಲಾಗುತ್ತಿದೆ. ಭ್ರಷ್ಟಾಚಾರದಲ್ಲಿ ಒಂದು ಇಲಾಖೆಗಿಂತ ಮತ್ತೊಂದು ಇಲಾಖೆ ಪೈಪೋಟಿ ನಡೆಸುತ್ತಿದೆ.   ಮುಖ್ಯಮಂತ್ರಿಯನ್ನು ಹಿಡಿದು ಸಚಿವರು ಭ್ರಷ್ಟಾಚಾರದಲ್ಲಿ ಮುಂದಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಗೆ ಬಂಗಾರದ ಪದಕ ಲಭಿಸಲಿದೆ. ಕಾಂಗ್ರೆಸ್ ನಿರ್ಮೂಲನೆ ಆಗುವುವರೆಗೂ ಅಭಿವೃದ್ದಿ ಸಾಧ್ಯವಿಲ್ಲ. ಕರ್ನಾಟಕದ ಭವಿಷ್ಯವನ್ನು ಬದಲಾಯಿಸುವ ಸುವರ್ಣ ಅವಕಾಶ ನಿಮ್ಮ ಕೈಯಲ್ಲಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News- Karnataka Crime News