ಕಾಂಗ್ರೆಸ್ ಇರೋವರೆಗೂ ನಮ್ಮ ದೇಶಕ್ಕೆ ಭವಿಷ್ಯ ಇಲ್ಲ-ಅನಂತಕುಮಾರ್ ಹೆಗಡೆ

21
ಸಾಂಧರ್ಬಿಕ ಚಿತ್ರ

Belgaum : (itskannada) ಬೆಳಗಾವಿ – ಕಾಂಗ್ರೆಸ್ ಇರೋವರೆಗೂ ನಮ್ಮ ದೇಶಕ್ಕೆ ಭವಿಷ್ಯ ಇಲ್ಲ-ಅನಂತಕುಮಾರ್ ಹೆಗಡೆ : ಚುನಾವಣಾ ಕಣದಲ್ಲಿ ಸೋಲು ಯಾರದು ಗೆಲುವು ಯಾರದು , ಯಾರು ಗೆಲ್ಲುತ್ತಾರೆ , ಯಾರು ಸೋಲಬೇಕು ಎಂದು ನಿರ್ದರಿಸುವವರು ಮತದಾರರು , ಯಾರು ಶಾಸಕರಾಗುತ್ತಾರೋ  ಗೊತ್ತಿಲ್ಲ ಆದ್ರೆ ಧರ್ಮದ ವಿಷಯ ಬಂದಾಗ ಬಿಜೆಪಿ ಎಂದೂ ರಾಜೀ ಮಾಡಿಕೊಂಡಿಲ್ಲ. ಕಿತ್ತೂರ ಬಳಿಯ ತಿಗಡೊಳ್ಳಿಯಲ್ಲಿ ಇಂದು ನಡೆದ ಬಹಿರಂಗ ಸಭೆಯಲ್ಲಿ ಹೀಗೆ ಹಿಂದೂ ಧರ್ಮದ ಸಮರ್ಥನೆ & ಕಾಂಗ್ರೆಸ್ ನ ತೆಗಳಿಕೆಗೆ ನಿಂತವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಕಾಂಗ್ರೆಸ್‌ ಹೈಕಮಾಂಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ವ್ಯಂಗ್ಯ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಇರೋವರೆಗೂ ನಮ್ಮ ದೇಶಕ್ಕೆ ಭವಿಷ್ಯ ಇಲ್ಲ-ಅನಂತಕುಮಾರ್ ಹೆಗಡೆ

ಗೆಲ್ಲಲೇ ಬೇಕು ಎಂಬ ಹಟದಿಂದ ದೇಶದಲ್ಲಿ ಹಿಂದೂ ಧರ್ಮ ಒಂದು ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ನೆನಪಾಗಿದೆ. ಅದಕ್ಕಾಗಿ ಈಗ ಮಠ ಮಂದಿರಗಳಿಗೆ ದೇವಸ್ಥಾನಗಳಿಗೆ ಅವರು ಹೋಗುತ್ತಿದ್ದಾರೆ. ಆ ಮನುಷ್ಯ (ರಾಹುಲ್)ನಿಗೆ ದೇವರ ತೀರ್ಥ ಹೇಗೆ ತಗೊಬೇಕು, ಹೇಗೆ ಕುಡಿಯಬೇಕು ಗೊತ್ತಿಲ್ಲ. ಯಾರೋ ಹೇಳಿದ್ರು ಅಂತ ಕಾವಿ ಬಟ್ಟೆ ಹಾಕ್ಕೊಂಡು ದೇವಸ್ಥಾನಕ್ಕೆ ಹೋದ…, ಮಠಕ್ಕೆ ರುದ್ರಾಕ್ಷಿ ಹಾಕೊಂಡು ಹೋದ…, ಮಸೀದಿಗೆ ಹೋಗಬೇಕು ಅಂದ್ರೆ ಕೋಳಿ ಪುಕ್ಕ ಹಾಕ್ಕೊಂಡು ಹೋದ…, ಈಗರ್ಜಿಗೆ ಕೊಳ್ಳಾಗ ಸಿಲುಬೆ ಹಾಕ್ಕೊಂಡು ಹೋದ…,ಬರೀ ನಾಟಕಾ ಮಾಡೋದ್ರಿ ಮತ್ತೇನಿಲ್ಲ…! ರಾಹುಲ್ ಗಾಂಧಿ ಅವ್ರಿಗೆ ಹೇಳ್ತೀನಿ ‘ನಮ್ಮ ದೇಶದ ಅತ್ಯಂತ ದೊಡ್ಡ ಶೃದ್ಧಾ ಕೇಂದ್ರ ಶ್ರವಣಬೆಳಗೊಳಕ್ಕೂ ಒಮ್ಮೆ ಹೋಗಿ ಬರ್ರಿ’ ಎಂದು ವ್ಯಂಗ್ಯವಾಡಿದರು. ಈ ವೇಳೆ ಕಾರ್ಯಕರ್ತರು ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ನಾಟಕಾ ಮಾಡೊ ಮಂದಿರೀ… ಅವರಿಗೆ ಶೃದ್ಧಾ ಪ್ರಾಮಾಣಿಕತೆ ಇಲ್ಲ. ಒಟ್ಟು ನಾವೂ ಹಂಗೆ ಹೋಗಬೇಕಂತ ಹೋಗ್ತಾರೆ. ಈ ನಾಟಕ ಕಂಪನಿ 70 ವರ್ಷ ದೇಶ ಆಳಿದೆ. ಈ ನಾಟಕ ಕಂಪನಿ ಮುಂದಿನ ವರ್ಷದಿಂದ ದೇಶದಲ್ಲಿ ಇರಬಾರದು. ಕಾಂಗ್ರೆಸ್ ಇರೊವರೆಗೂ ನಮ್ಮ ದೇಶಕ್ಕೆ ಭವಿಷ್ಯ ಇಲ್ಲ. ಹಿಂದೂ ಧರ್ಮವನ್ನು ಅವಮಾನ ಮಾಡಿ ದೇಶವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಅನಂತಕುಮಾರ ವಾಗ್ದಾಳಿ ಮುಂದುವರೆಸಿದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ – ಕ್ಲಿಕ್ಕಿಸಿ – Belgaum News In Kannada – Belgaum News Kannada

Open

error: Content is protected !!