ಆಮಿಷಗಳಿಗಾಗಿ ಮತಗಳನ್ನು ಮಾರಿಕೊಳ್ಳಬೇಡಿ-ಹುಚ್ಚ ವೆಂಕಟ್

30

Politics (itskannada) ಆಮಿಷಗಳಿಗಾಗಿ ಮತಗಳನ್ನು ಮಾರಿಕೊಳ್ಳಬೇಡಿ-ಹುಚ್ಚ ವೆಂಕಟ್ : ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹುಚ್ಚ ವೆಂಕಟ್ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾನು, ತಂದೆಯ ಪಾದರಕ್ಷೆಯನ್ನೆ ನನ್ನ ಚುನಾವಣಾ ಚಿಹ್ನೆಯಾಗಿ ಮಾಡಿಕೊಂಡಿರುವುದಾಗಿ ಹೇಳಿದರು.

ಆಮಿಷಗಳಿಗಾಗಿ ಮತಗಳನ್ನು ಮಾರಿಕೊಳ್ಳಬೇಡಿ-ಹುಚ್ಚ ವೆಂಕಟ್

ಮತದಾನದ ಮೂಲಕ ಈ ನಾಡಿನ ಭವಿಷ್ಯ ಬರೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಹಣ, ಆಮಿಷಗಳಿಗಾಗಿ ಮತಗಳನ್ನು ಮಾರಿಕೊಳ್ಳಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ನಟ ಹುಚ್ಚ ವೆಂಕಟ್ ಕರೆ ನೀಡಿದ್ದಾರೆ. ಚುನಾವಣೆಯ ಹಂತದಲ್ಲಿ ಆಮಿಷಗಳಿಗೆ ಯಾರು ತಮ್ಮನ್ನು ತಾವು ಮಾರಿಕೊಳ್ಳುತ್ತಾರೋ, ಅವರು ನನ್ನ ಎಕ್ಕಡಕ್ಕೆ ಸಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಚುನಾವಣೆಯ ಸಂದರ್ಭ ಮತಗಳಿಗಾಗಿ ಚುನಾವಣಾ ಆಯೋಗ ನಿಗದಿ ಮಾಡಿರುವ 25 ಲಕ್ಷ ರೂ.ಗಳಷ್ಟು ಹಣವನ್ನು ನಾನು ಪ್ರಚಾರಕ್ಕಾಗಿ ಖರ್ಚು ಮಾಡಲಾರೆ.

ವೇದಿಕೆ ಹತ್ತಿ ಪ್ರಚಾರವನ್ನು ಕೂಡ ಮಾಡುವುದಿಲ್ಲವೆಂದ ಹುಚ್ಚ ವೆಂಕಟ್, ಚುನಾವಣೆಗೆಂದು ಹಣವನ್ನು ವ್ಯಯ ಮಾಡುವ ಬದಲು ಅದನ್ನು ಸಮಾಜಕ್ಕೆ, ಬಡ ಜನರಿಗೆ ವಿನಿಯೋಗಿಸುವುದು ಸೂಕ್ತವೆಂದರು.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಮುಂದಿನ ಬಾರಿ ಮಂಡ್ಯದಿಂದ ಲೋಕಸಭಾ ಚುಣಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದರು. ಚುನಾವಣೆಯನ್ನು ಎದುರಿಸಲು ಇತರರು ಮಾಡುವಂತೆ ನಾನು ಕುಕ್ಕರ್, ಹಣ, ಮದ್ಯ, ಸೀರೆಯನ್ನು ಮತದಾರರಿಗೆ ನೀಡಲಾರೆ. ಇದರ ಬದಲಿಗೆ ಜನರ ಸೇವೆಯ ಮೂಲಕ ಈ ಸಮಾಜಕ್ಕೆ ನನ್ನ ಬೆವರು ಮತ್ತು ರಕ್ತವನ್ನು ನೀಡುತ್ತೇನೆ. ನನ್ನ ಬಗ್ಗೆ ನಂಬಿಕೆ ಇದ್ದರೆ ಮತ ಹಾಕುತ್ತಾರೆ. ಇಲ್ಲವೆಂದರೂ ಸಾಮಾಜಿಕ ಕಳಕಳಿಯಿಂದ ಹಿಂದೆ ಸರಿಯುವುದಿಲ್ಲವೆಂದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News

itskananda ನ್ಯೂಸ್ ಪೋರ್ಟಲ್ ಗೆ ಹೊಸ ಪುಟಗಳು ಸೇರ್ಪಡೆ – Video News Kannada – Telugu Cinema News in Kannada – Bollywood Film News Kannada – TollyWood News Kannada – Bollywood News Kannada 

Open

error: Content is protected !!