ಅವನ ಕೊಲೆಗೆ ಕಾರಣವಾಯ್ತು ಮಟನ್ ಸಾರು….

22

Crime News (itskannada)ಅವನ ಕೊಲೆಗೆ ಕಾರಣವಾಯ್ತು ಮಟನ್ ಸಾರು : ಪತ್ನಿಯ ಬಳಿ ಮಟನ್ ಸಾರು ಮಾಡು ಎಂದಿದ್ದಕ್ಕೆ ಪತಿಯ ಕೊಲೆ ಮಾಡಿರುವ ಘಟನೆಯು ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಮನೆಗೆ ಬಂದ ಗೋಪಾಲ್ (46) ತನ್ನ ಪತ್ನಿ ರುದ್ರಮ್ಮ ಬಳಿ ಮಟನ್ ಸಾರು ಮಾಡು ಎಂದು ಗಲಾಟೆ ಮಾಡತೊಡಗಿದನು. ಪತಿಯ ನಡವಳಿಕೆಯನ್ನು ಕಂಡು ರೊಚ್ಚಿಗೆದ್ದ ಪತ್ನಿಯು ಆತನ ಕೊಲೆ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಈ ಘಟನೆಯು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Crime News – Kannada News

Open

error: Content is protected !!