ಕೋಲಾರ-ದಂಪತಿ ಅನುಮಾನಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣು

couple commits suicide in kolar

Kolar (itskananda) ಕೋಲಾರ-ದಂಪತಿ ಅನುಮಾನಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣು-couple commits suicide in kolar : ಬಂಗಾರಪೇಟೆ ತಾಲೂಕು ಚಿಕ್ಕಕಣಿವೆಕಲ್ಲು ಗ್ರಾಮದ ದಂಪತಿಗಳು ಅನುಮಾನಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಾಣಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕು ಚಿಕ್ಕಕಣಿವೆಕಲ್ಲು ಗ್ರಾಮದ ಬಾಲರಾಜು (35) ಮತ್ತು ಚಲ್ಲಕಣ್ಣು (20) ನೇಣಿಗೆ ಶರಣಾದ ದಂಪತಿ. ತಮ್ಮ ಮನೆಯಲ್ಲೇ ಇಬ್ಬರೂ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಾಲರಾಜು ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಶರಣಾದರೆ, ಪತ್ನಿ ಚಲ್ಲಕಣ್ಣು ಪತಿಯ ಶವದ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.

ಸದ್ಯ ಘಟನೆ ನಡೆದ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –  Kolar News Kannada – Karnataka Crime News – Kannada News