ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ

Vegetable Biryani-Easy Method | itskannada Recipes

174

ಬೆಂ, ಡಿಸೆಂಬರ್ 30 (itskannada)ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ : ತರಕಾರಿ ಬಿರಿಯಾನಿ ಮಾಡಬೇಕೆ ? ಹಾಗಾದರೆ  ಇಲ್ಲಿದೆ ಸಲಭ ವಿಧಾನ , ಸರಳವಾಗಿ  ವೆಜಿಟೆಬಲ್ ಬಿರಿಯಾನಿ ಮಾಡೋದನ್ನ ನೀವು ಕಲಿಯಬಹುದು . ಹಬ್ಬ-ಹರಿ ದಿನಗಳಲ್ಲಿ ತಯಾರು ಮಾಡಿ ನಿಮ್ಮ ಕುಟುಂಬದೊಂದಿಗೆ ಸವಿಯಬಹುದು .

ಈ ಹಿಂದಿನ ಲೇಖನದಲ್ಲಿ ರುಚಿ-ರುಚಿಕರ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ ಎಂದು ಕಲಿತಾಯಿತಲ್ವಾ , ಹಾಗಾದರೆ ಈಗ  ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ ನೋಡೋಣ . ನೀವೇ ಮಾಡಿ , ಅದರ ಸವಿಯನ್ನ ನಿಮ್ಮ ಕುಟುಂಬಕ್ಕೆ ಸವಿಯಲು ಕೊಡಿ.

ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ

ಮೊದಲಿಗೆ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು :

    • ಬಾಸುಮತಿ ಅಕ್ಕಿ , ಬೀನ್ಸ್ , ಹೆಚ್ಚಿಕೊಂಡ ಕ್ಯಾರೆಟ್ , ಅಲೂಗಡ್ಡೆ, ಹೂಕೋಸು , ಹಸಿ ಬಟಾಣಿ, ಈರುಳ್ಳಿ .
    • ರುಚಿಗೆ ತಕ್ಕಷ್ಟು ಉಪ್ಪು , ಅಡುಗೆ ಎಣ್ಣೆ , ಏಲಕ್ಕಿ , ದಾಲ್ಚಿನ್ನಿ ,ಲವಂಗ , ಮೊಗ್ಗು , ಪಲಾವ್ ಎಲೆ.

ಮೊದಲೇ ರುಬ್ಬಿಟ್ಟು ಕೊಳ್ಳಬೇಕಾದ ಪದಾರ್ಥಗಳು :

ತೆಂಗಿನ ತುರಿ , ಕೊತ್ತಂಬರಿ ಸೊಪ್ಪು , ಹಸಿಮೆಣಸಿನಕಾಯಿ , ಬೆಳ್ಳುಳ್ಳಿ .

ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ

ಬಾಸುಮತಿ ಅಕ್ಕಿಯನ್ನು ಸ್ವಚ್ಛ ಮಾಡಿಕೊಳ್ಳಿ , ನಂತರ ಒಂದು ಪಾತ್ರೆಗೆ ನೀರನ್ನು ಹಾಕಿ ಸ್ವಚ್ಛ ಮಾಡಿಕೊಂಡ ಅಕ್ಕಿಯನ್ನು ಆ ನೀರಿನಲ್ಲಿ ಹಾಕಿ ನೆನೆಯಲು ಬಿಡಿ .

೧೦ ರಿಂದ ೧೫ನಿಮಿಷಗಳ ಕಾಲ ಅಕ್ಕಿ ನೆನೆಯಲಿ , ಅಕ್ಕಿ ನೆಂದ ನಂತರ , ನೀರನ್ನು ಬಸೆದು ಅಕ್ಕಿಯನ್ನು ರೆಡಿಯಾಗಿ ಇಟ್ಟುಕೊಳ್ಳಿ.

ಈಗ ಒಲೆಯ ಮೇಲೆ ಪಾತ್ರೆ ಅಥವಾ ಕುಕ್ಕರ್ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಎನ್ನೆಯು ಕಾಯಲು ಬಿಡಿ , ಕಾದ ಎಣ್ಣೆಗೆ ಮೊದಲೇ ತಯಾರಾಗಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಹಾಗೂ ಈರುಳ್ಳಿ , ಬೆಳ್ಳುಳ್ಳಿಯನ್ನು ಹಾಕಿ ಹುರಿಯಲು ಪ್ರಾರಂಭಿಸಿ. ಸ್ವಲ್ಪ ಕಡಿಮೆ ಉರಿಯಲ್ಲಿ ಹುರಿಯಿರಿ.

ಸ್ವಲ್ಪ ತಾಸು ಹುರಿದ ನಂತರ , ನೀರಿನಲ್ಲಿ ನೆನೆಸಿಟ್ಟು ಬೇರ್ಪಡಿಸಿದ ಅಕ್ಕಿಯನ್ನು ಇದಕ್ಕೆ ಹಾಕಿ ಮತ್ತೆ ಕೆದುಕಿ

ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ-itskannada

ಹುರಿಯಿರಿ. ಎಲ್ಲಾ ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿ ಅರ್ದ ಬೇಯಿಸಿಕೊಳ್ಳಿ , ಬೇಯಿಸಿಕೊಂಡ ಆ ತರಕಾರಿಗಳನ್ನು ಈ ಕುಕ್ಕರ್ ಗೆ ಹಾಕಿ ಕೆದುಕಿಕೊಡಿ. ಸ್ವಲ್ಪ ತಾಸು ತಡೆದು , ಬೇಕಾಗಿರುವ ಮಟ್ಟಿಗೆ ಬಿಸಿನೀರು , ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಟ್ಟು ಕುಕ್ಕರ್ ಮುಚ್ಚಳವನ್ನು ಹಾಕಿ . ಸ್ವಲ್ಪ ಉರಿ ಜಾಸ್ತಿ ಮಾಡಿ ಬೇಯಿಸಿ. ಬೆಂದ ಮೇಲೆ ಕುಕ್ಕರ್ ಕೆಳಗಿಳಿಸಿ, ಕುಕ್ಕರ್ ಪೂರ್ಣ ಆರುವ ತನಕ ಕಾಯಿರಿ , ಪೂರ್ಣ ಆರಿದ ಮೇಲೆ  ಕುಕ್ಕರ್ ಮುಚ್ಚಳ ತೆರೆಯಿರಿ , ಈಗ ನಿಮ್ಮ ಬೋಬಾಟ್ ಘಮ ಘಮ ಬಿರಿಯಾನಿ ಸವಿಯಲು ಸಿದ್ದ. ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ ತಿಳಿದು ಕೊಂಡರಲ್ಲಾ … ಇನ್ನೇಕೆ ತಡ ಇಂದೇ  ಬಿರಿಯಾನಿ ಮಾಡಿ ಸವಿಯಿರಿ. -| itskannada Recipes

WebTitle : Vegetable Biryani-Easy Method

Keyword : ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ , Vegetable Biryani-Easy Method ,

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!