5 ನಿಮಿಷದಲ್ಲಿ ಘೀರೈಸ್ ಮಾಡುವುದು ಹೇಗೆ ?

How to make Ghee rice in 5 minutes | itskannada Recipes

0 190

(itskannada): 5 ನಿಮಿಷದಲ್ಲಿ ಘೀರೈಸ್ ಮಾಡುವುದು ಹೇಗೆ ?  ಹಬ್ಬಗಳಲ್ಲಿ ಮೊದಲಿಗೆ ನಮ್ಮ ಹೆಂಗಳೆಯರು ಆಲೋಚಿಸುವುದು ಯಾವ ಅಡುಗೆ ಮಾಡುವುದು , ವಿಧ ವಿಧದ ಅಡುಗೆ ಮಾಡಿ ತಮ್ಮ ಕುಟುಂಬದವರಿಂದ ಶಹಬ್ಬಾಸ್ ಗಿರಿ ಪಡೆಯಬೇಕು.

ಅದು ರುಚಿಕರವಾಗಿಯು ಮಾಡಲು ಸುಲಭವಾಗಿಯೂ ಇರಬೇಕು. ಆ ಹೌದು ನೀವು ಹಬ್ಬ-ಹರಿದಿನಗಳಲ್ಲಿ ಘೀರೈಸ್  ಮಾಡಿ ಅದರ ಸವಿಯನ್ನು ನಿಮ್ಮ ಕುಟುಂಬದವರಿಗೆ ಉಣಬಡಿಸಬಹುದು.

ಬನ್ನಿ ಆ ಸುಲಭ ರಿತಿಯನ್ನ ನೋಡೋಣ.

ಈ ಹಿಂದಿನ ಲೇಖನದಲ್ಲಿ ವಾಂಗೀಬಾತ್ ಮಾಡುವ ಸುಲಭ ವಿಧಾನ ತಿಳಿದುಕೊಂಡಿದ್ದಾಯಿತು , ಹಾಗಾದರೆ ಈಗ  ಘೀರೈಸ್ ಮಾಡುವುದು ಹೇಗೆ ಎಂಬ ವಿಧಾನ ಕಲಿಯೋಣ.

ಘೀರೈಸ್ ಮಾಡಲು ಬೇಕಾದ ಪದಾರ್ಥಗಳು.

  • ಅಕ್ಕಿ ( ಬಾಸುಮತಿ ) , ತುಪ್ಪ , ಗೋಡಂಬಿ , ಎಣ್ಣೆ , ಹಸಿಮೆಣಸಿನಕಾಯಿ , ಹಸಿಬಟಾಣಿ , ಇರುಳ್ಳಿ , ತೆಂಗಿನಕಾಯಿ , ಕ್ಯಾರೆಟ್ , ಆಲೂಗಡ್ಡೆ , ದೊಡ್ಡ ಮೆಣಸಿನಕಾಯಿ , ಅವರೆಕಾಯಿ ( ಚಪ್ಪರದ ) , ಹೂ ಕೋಸು , ಕೊತ್ತಂಬರಿ ಸೊಪ್ಪು , ಏಲಕ್ಕಿ , ಲವಂಗ , ಪಲಾವ್ ಎಲೆ , ರುಚಿಗೆ ತಕ್ಕಷ್ಟು ಉಪ್ಪು .

ಘೀರೈಸ್ ಮಾಡುವುದು ಹೇಗೆ- ವಿಧಾನ.

  • ಮೊದಲಿಗೆ ಅಕ್ಕಿಯನ್ನು ಸ್ವಚ್ಚಗೊಳಿಸಿಕೊಳ್ಳಿ  , ಸ್ವಚ್ಛಗೊಳಿಸಿದ ಅಕ್ಕಿಯನ್ನು ನೀರಿನಲ್ಲಿ ತೊಳೆಯಿರಿ , ತೊಳೆದ ನಂತರ ಅಕ್ಕಿಯನ್ನು ನೆನೆಯಲು ಬಿಡಿ , ೧೦ ರಿಂದ ೧೫ ನಿಮಿಷಗಳ ಕಾಲ ಅಕ್ಕಿ ನೆನೆಯಲಿ .

ಅಕ್ಕಿ ನೆನೆಸಿದಾಗ ಅನ್ನವು ಮೃದುವಾಗಿಯೂ ಹಾಗು ಉದುರಾಗಿಯು ಆಗುತ್ತದೆ .

ನೆಂದ ಅಕ್ಕಿಯಿಂದ ನೀರನ್ನು ಬೇರ್ಪಡಿಸಿ. ಒಂದು ಪಾತ್ರೆಗೆ ತುಪ್ಪ ಹಾಕಿ ಆ ತುಪ್ಪದಲ್ಲಿ ಅಕ್ಕಿಯನ್ನು ಹುರಿದುಕೊಳ್ಳಿ , ಅಕ್ಕಿಯ

How to make Ghee rice in 5 minutes-itskannada

ಲ್ಲಿನ ನೀರಿನ ಅಂಶ ಹೋಗುವ ತನಕವಷ್ಟೇ ಹುರಿಯಿರಿ. ತದನಂತರ ಮೇಲೆ ತಿಳಿಸಿದ ತರಕಾರಿಗಳನ್ನು ಸಿದ್ದಮಾಡಿಕೊಳ್ಳಿ  ,

ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ .ತೆಂಗಿನಕಾಯಿಯನ್ನು ಹೊಡೆದುಕೊಂಡು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ , ರುಬ್ಬಿದ ತೆಂಗಿನಕಾಯಿಯ ಹಾಲನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ , ( ತೆಂಗಿನಕಾಯಿಯ ಹಿಪ್ಪೆಯನ್ನು ಬೇರ್ಪಡಿಸಿ ) .

ಒಲೆಯ ಮೇಲೆ ಕುಕ್ಕರ್ ಇಟ್ಟು ಎಣ್ಣೆಯನ್ನು ಹಾಕಿರಿ. ಎಣ್ಣೆಯನ್ನು ಕಾಯಲು ಬಿಡಿ , ಕಾದ ಎಣ್ಣೆಗೆ ಮಸಾಲೆ ಪದಾರ್ಥಗಳು , ಮೆಣಸಿನಕಾಯಿ , ಈರುಳ್ಳಿಯನ್ನು ಹಾಕಿ ಕೆದುಕಿ ಕೊಡಿ ,

ತೆಳ್ಳನೆ ಉರಿಯಲ್ಲಿ ಸ್ವಲ್ಪ ಕೆದುಕಿ ಕೊಡಿ. ಪಾತ್ರೆಯಲ್ಲಿ ಈರುಳ್ಳಿ ಸ್ವಲ್ಪ ಕೆಂಪು ಬಣ್ಣಕ್ಕೆ ಬಂದ ಮೇಲೆ ಉಳಿದ ತರಕಾರಿಗಳನ್ನು ಹಾಕಿ ಮತ್ತೆ ಕೆದುಕಲು ಪ್ರಾರಂಬಿಸಿ. ಸ್ವಲ್ಪ ತಾಸು ಬೆಂದ ಮೇಲೆ ಸಿದ್ದಮಾಡಿಟ್ಟುಕೊಂಡಿರುವ ತೆಂಗಿನಕಾಯಿಯ ಹಾಲನ್ನು ಹಾಕಿ. ಉರಿಯನ್ನು ಸಾದಾರಣ ಮಟ್ಟದಲ್ಲಿ ಇಡಿ ಹಾಗು ಚೆನ್ನಾಗಿ ಕುದಿ ಬಂದಮೇಲೆ ಅಕ್ಕಿ ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ . ಮತ್ತೆ ಬೇಯಲು ಬಿಡಿ . ಕೊನೆಯದಾಗಿ ಕುಕ್ಕರ್ ಕೆಳಗಿಳಿಸಿ ಅದು ಆರಿದ ನಂತರ ಅನ್ನದ ಮೇಲೆ  ಉಳಿದಿರುವ ಹಾಗು ತುಪ್ಪದಲ್ಲಿ ಉರಿದು ಕೊಂಡಿರುವ ಗೋಡಂಬಿ ಮತ್ತು ಅಲಂಕಾರಕ್ಕೆ ಅಥವಾ ಸುವಾಸನೆಗೆ ಕೊತ್ತಂಬರಿ ಸೊಪ್ಪು ಹರಡಿ ..  ಅಲ್ಲಿಗೆ ಘಮ ಘಮ ಪರಿಮಳಯುತ ಗೀರೈಸ್ ತಯಾರಾದಂತೆ…. ಇನ್ನು ನಿಮ್ಮ ಕೈ ರುಚಿಯ ಘೀರೈಸ್ ಸವಿಯಿರಿ ಹಾಗು ನಿಮ್ಮ ಕುಟುಂಬದವರಿಗೂ ಸವಿಯಲು ಕೊಡಿ . ಘೀರೈಸ್ ಮಾಡುವುದು ಹೇಗೆ ಅನ್ನುವುದು ತಿಲಿದಾಯಿತಲ್ವಾ , ಮತ್ತಿನ್ನೇಕೆ ತಡ ಈ ದಿನವೇ ಮಾಡಲು ಪ್ರಯತ್ನಿಸಿ. -| itskannada Recipes

Web-title : How to make Ghee rice in 5 minutes

Keyword : ಘೀರೈಸ್ ಮಾಡುವುದು ಹೇಗೆ , How to make Ghee rice , Ghee rice .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

80%
Awesome
  • Design
error: Content is protected !!